1 Samuel 29:5 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದಾವೀದನೆಂಬ ಈ ವ್ಯಕ್ತಿಯನ್ನು ಕುರಿತು, ಇಸ್ರೇಲರು ಕುಣಿಯುತ್ತಾ ಹಾಡುವ ಹಾಡು ಹೀಗಿದೆ: ಸೌಲನು ಸಾವಿರಗಟ್ಟಲೆ ಶತ್ರುಗಳನ್ನು ಕೊಂದನು. ದಾವೀದನು ಲಕ್ಷಾಂತರಗಟ್ಟಲೆ ಶತ್ರುಗಳನ್ನು ಕೊಂದನು!” ಎಂದು ಹೇಳಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
‘ಸೌಲನು ಸಾವಿರಾರು ಶತ್ರುಗಳನ್ನು ಕೊಂದನು. ದಾವೀದನು ಹತ್ತು ಸಾವಿರಾರು ಶತ್ರುಗಳನ್ನು ಕೊಂದನು’ ಎಂದು ಸ್ತ್ರೀಯರು ಕುಣಿಯುತ್ತಾ ಹಾಡಿದ್ದು ಈ ದಾವೀದನನ್ನು ಕುರಿತೇ ಅಲ್ಲವೇ?” ಅಂದರು.
Kannada BSI Bible 2016
ಸೌಲನು ಸಾವಿರ ಜನರನ್ನೂ ದಾವೀದನು ಹತ್ತು ಸಾವಿರ ಜನರನ್ನೂ ಹೊಡೆದನೆಂದು ನಾಟ್ಯದಲ್ಲಿ ಒಬ್ಬರಿಗೊಬ್ಬರು ಹಾಡಿದ್ದು ಈ ದಾವೀದನನ್ನು ಕುರಿತಲ್ಲವೋ ಅಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸೌಲನು ಸಾವಿರಗಟ್ಟಳೆಯಾಗಿ ಕೊಂದನು; ದಾವೀದನು ಹತ್ತು ಸಾವಿರಗಟ್ಟಳೆಯಾಗಿ ಕೊಂದನು ಎಂದು ಸ್ತ್ರೀಯರು ಕುಣಿಯುತ್ತಾ ಪರಸ್ಪರವಾಗಿ ಹಾಡಿದ್ದು ಈ ದಾವೀದನನ್ನೇ ಕುರಿತಲ್ಲವೋ ಅಂದರು.
Kannada Bible (KNCL) BSI 2016
‘ಸೌಲನು ಕೊಂದನು ಸಾವಿರಗಟ್ಟಳೆ, ದಾವೀದನೋ ಕೊಂದನು ಹತ್ತು ಸಾವಿರಗಟ್ಟಳೆ,’ ಎಂದು ಮಹಿಳೆಯರು ಕುಣಿಯುತ್ತಾ ಪರಸ್ಪರವಾಗಿ ಹಾಡಿದ್ದು ಈ ದಾವೀದನನ್ನೇ ಕುರಿತು ಅಲ್ಲವೇ?’ ಎಂದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸ್ತ್ರೀಯರು ತಮ್ಮ ನೃತ್ಯಗಳಲ್ಲಿ ಹಾಡಿದ ದಾವೀದನು ಇವನಲ್ಲವೇ: “ ‘ಸೌಲನು ಸಾವಿರ ಜನರನ್ನೂ, ದಾವೀದನು ಹತ್ತು ಸಾವಿರ ಜನರನ್ನೂ ಹೊಡೆದನು.’ ”