1 Samuel 3:14 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದಕಾರಣವೇ, ಏಲಿಯ ಕುಟುಂಬವು ಅರ್ಪಿಸುವ ಯಜ್ಞವಾಗಲಿ ಧಾನ್ಯನೈವೇದ್ಯವಾಗಲಿ ಅವರ ಪಾಪಗಳಿಗೆ ಪ್ರಾಯಶ್ಚಿತ್ತವಾಗುವುದಿಲ್ಲವೆಂದು ಪ್ರಮಾಣ ಮಾಡುತ್ತೇನೆ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಏಲಿಯ ಮನೆಯವರ ಅಪರಾಧಕ್ಕೆ ಯಜ್ಞ ಅಥವಾ ನೈವೇದ್ಯಗಳಿಂದ ಎಂದಿಗೂ ಪ್ರಾಯಶ್ಚಿತ್ತವಾಗುವುದಿಲ್ಲ ಎಂಬುದಾಗಿ ಆಣೆಯಿಟ್ಟಿದ್ದೇನೆ” ಎಂದು ಹೇಳಿದನು.
Kannada BSI Bible 2016
ಆದದರಿಂದ ಏಲಿಯ ಮನೆಯ ದುಷ್ಟತನವು ಎಂದೆಂದಿಗೂ ಬಲಿ ಯಿಂದಲಾದರೂ ಅರ್ಪಣೆಯಿಂದಲಾದರೂ ಶುದ್ಧ ಮಾಡಲ್ಪಡುವದಿಲ್ಲ ಎಂದು ನಾನು ಏಲಿಯ ಮನೆ ಯನ್ನು ಕುರಿತು ಆಣೆ ಇಟ್ಟೆನು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಏಲಿಯ ಮನೆಯವರ ಅಪರಾಧಕ್ಕೆ ಯಜ್ಞ ನೈವೇದ್ಯಗಳಿಂದಲೂ ಎಂದಿಗೂ ಪ್ರಾಯಶ್ಚಿತ್ತವಾಗುವದಿಲ್ಲವೆಂಬದಾಗಿ ಆಣೆಯಿಟ್ಟಿದ್ದೇನೆ ಎಂದು ಹೇಳಿದನು.
Kannada Bible (KNCL) BSI 2016
ಏಲಿಯ ಮನೆಯವರ ಅಪರಾಧವು ಎಂದಿಗೂ ಬಲಿಯಿಂದಾಗಲಿ ನೈವೇದ್ಯಗಳಿಂದಾಗಲಿ ಪರಿಹಾರವಾಗುವುದಿಲ್ಲವೆಂದು ಪ್ರಮಾಣಮಾಡಿದ್ದೇನೆ,” ಎಂದು ಹೇಳಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದ್ದರಿಂದ ‘ಏಲಿಯ ಮನೆಯ ದುಷ್ಟತನವು ಎಂದೆಂದಿಗೂ ಬಲಿಯಿಂದಲಾದರೂ, ಅರ್ಪಣೆಯಿಂದಲಾದರೂ ಪ್ರಾಯಶ್ಚಿತ್ತವಾಗುವದಿಲ್ಲ, ಎಂದು ನಾನು ಏಲಿಯ ಮನೆಯನ್ನು ಕುರಿತು ಪ್ರಮಾಣಮಾಡಿದೆನು,’ ” ಎಂದರು.