1 Samuel 3:9 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಏಲಿಯು ಸಮುವೇಲನಿಗೆ, “ಹೋಗಿ ಮಲಗಿಕೊ. ನಿನ್ನನ್ನು ಮತ್ತೆ ಕರೆದರೆ, ‘ಅಪ್ಪಣೆಯಾಗಲಿ, ಯೆಹೋವನೇ ನಾನು ನಿನ್ನ ಸೇವಕ, ಕೇಳಿಸಿಕೊಳ್ಳುತ್ತಿದ್ದೇನೆ’ ಎಂದು ಉತ್ತರಿಸು” ಎಂಬುದಾಗಿ ಹೇಳಿದನು. ಸಮುವೇಲನು ತನ್ನ ಸ್ಥಳದಲ್ಲಿ ಮಲಗಲು ಹೋದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಪುನಃ ಆತನು ನಿನ್ನನ್ನು ಕರೆದರೆ ಯೆಹೋವನೇ, ಅಪ್ಪಣೆಯಾಗಲಿ, ನಿನ್ನ ದಾಸನು ಕೇಳಿಸಿಕೊಳ್ಳುತ್ತಿದ್ದಾನೆ” ಎಂದು ಹೇಳು ಅಂದನು. ಸಮುವೇಲನು ತಿರುಗಿ ಹೋಗಿ ತನ್ನ ಸ್ಥಳದಲ್ಲಿ ಮಲಗಿಕೊಂಡನು.
Kannada BSI Bible 2016
ಏಲಿಯು ಸಮುವೇಲ ನಿಗೆ--ಹೋಗಿ ಮಲಗು; ಆತನು ನಿನ್ನನ್ನು ಕರೆದಾಗ ನೀನು--ಕರ್ತನೇ, ಮಾತನಾಡು; ನಿನ್ನ ದಾಸನು ಕೇಳು ತ್ತಾನೆ ಎಂದು ಹೇಳು ಅಂದನು. ಹಾಗೆಯೇ ಸಮು ವೇಲನು ಹೋಗಿ ತನ್ನ ಸ್ಥಳದಲ್ಲಿ ಮಲಗಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ತಿರಿಗಿ ಶಬ್ದವಾದರೆ ಯೆಹೋವನೇ, ಅಪ್ಪಣೆಯಾಗಲಿ, ನಿನ್ನ ದಾಸನು ಕಾದಿದ್ದಾನೆ ಎಂದು ಹೇಳು ಅಂದನು. ಸಮುವೇಲನು ತಿರಿಗಿ ಹೋಗಿ ತನ್ನ ಸ್ಥಳದಲ್ಲಿ ಮಲಗಿಕೊಳ್ಳಲು
Kannada Bible (KNCL) BSI 2016
ಅವನು ಸಮುವೇಲನಿಗೆ, “ಹೋಗಿ ಮಲಗಿಕೋ; ಮತ್ತೆ ಅವರು ನಿನ್ನನ್ನು ಕರೆದರೆ, ‘ಸರ್ವೇಶ್ವರಾ, ಅಪ್ಪಣೆಯಾಗಲಿ; ತಮ್ಮ ದಾಸ ಕಾದಿದ್ದಾನೆ,’ ಎಂದು ಹೇಳು,” ಎಂದನು. ಸಮುವೇಲನು ಹಿಂದಿರುಗಿ ಹೋಗಿ ತನ್ನ ಸ್ಥಳದಲ್ಲೇ ಮಲಗಿಕೊಂಡನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಏಲಿಯು ಸಮುಯೇಲನಿಗೆ, “ನೀನು ಹೋಗಿ ಮಲಗು; ಅವರು ನಿನ್ನನ್ನು ಕರೆದರೆ, ಆಗ ನೀನು, ‘ಯೆಹೋವ ದೇವರೇ, ಮಾತನಾಡಿ, ನಿಮ್ಮ ದಾಸನು ಕೇಳುತ್ತಾನೆ,’ ಎಂದು ಹೇಳು,” ಎಂದನು. ಹಾಗೆಯೇ ಸಮುಯೇಲನು ಹೋಗಿ ತನ್ನ ಸ್ಥಳದಲ್ಲಿ ಮಲಗಿದನು.