1 Samuel 30:16 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಈಜಿಪ್ಟಿನವನು ದಾವೀದನನ್ನು ಅಮಾಲೇಕ್ಯರ ಬಳಿಗೆ ಕರೆದುಕೊಂಡು ಹೋದನು. ಅವರು ತಿನ್ನುತ್ತಾ ಕುಡಿಯುತ್ತಾ ಸುತ್ತುವರಿದು ನೆಲದ ಮೇಲೆ ಬಿದ್ದಿದ್ದರು. ಫಿಲಿಷ್ಟಿಯರ ಮತ್ತು ಯೆಹೂದ್ಯರ ದೇಶದಿಂದ ಸೂರೆಮಾಡಿದ ವಸ್ತುಗಳಿಂದ ಸಂಭ್ರಮವನ್ನು ಆಚರಿಸುತ್ತಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ಅಲ್ಲಿಗೆ ಹೋದಾಗ ಆ ಗುಂಪಿನವರು ತಮಗೆ ಫಿಲಿಷ್ಟಿಯ ಮತ್ತು ಯೆಹೂದ ಪ್ರಾಂತ್ಯಗಳಲ್ಲಿ ದೊರಕಿದ ದೊಡ್ಡ ಕೊಳ್ಳೆಯ ನಿಮಿತ್ತವಾಗಿ ಸಂತೋಷಿಸಿ, ಉಂಡು ಕುಡಿದು, ಕುಣಿದಾಡುತ್ತಾ ಅಲ್ಲಿನ ಬೈಲಿನಲ್ಲಿ ವ್ಯಾಪಿಸಿಕೊಂಡಿದ್ದರು.
Kannada BSI Bible 2016
ಇವನು ದಾವೀದನನ್ನು ಕರಕೊಂಡು ಅಲ್ಲಿಗೆ ಹೋದಾಗ ಅವರು ಭೂಮಿಯ ಮೇಲೆ ಎಲ್ಲೆಲ್ಲಿಯೂ ಫಿಲಿಷ್ಟಿಯರ ದೇಶ ದಲ್ಲಿಯೂ ಯೆಹೂದ ದೇಶದಲ್ಲಿಯೂ ವ್ಯಾಪಿಸಿ ಕೊಂಡು ಎಲ್ಲಾ ಕೊಳ್ಳೆತಕ್ಕೊಂಡು ಬಂದದರಿಂದ ತಿಂದು ಕುಡಿದು ನಾಟ್ಯವಾಡಿಕೊಂಡಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ಅಲ್ಲಿಗೆ ಹೋದಾಗ ಆ ಗುಂಪಿನವರು ತಮಗೆ ಫಿಲಿಷ್ಟಿಯ ಯೆಹೂದ ಪ್ರಾಂತಗಳಲ್ಲಿ ದೊರಕಿದ ದೊಡ್ಡ ಕೊಳ್ಳೆಯ ನಿವಿುತ್ತವಾಗಿ ಸಂತೋಷಿಸಿ ಉಂಡು ಕುಡಿದು ಕುಣಿದಾಡುತ್ತಾ ಅಲ್ಲಿನ ಬೈಲಿನಲ್ಲಿ ವ್ಯಾಪಿಸಿಕೊಂಡಿದ್ದರು.
Kannada Bible (KNCL) BSI 2016
ಅವರು ಅಲ್ಲಿಗೆ ಹೋದಾಗ ಆ ದಾಳಿಕಾರರು ತಮಗೆ ಫಿಲಿಷ್ಟಿಯ ಹಾಗು ಯೆಹೂದ ಪ್ರಾಂತ್ಯಗಳಲ್ಲಿ ದೊರಕಿದ್ದ ದೊಡ್ಡಕೊಳ್ಳೆಯ ನಿಮಿತ್ತ ಸಂತೋಷಿಸಿ, ತಿಂದು, ಕುಡಿದು, ಕುಣಿದಾಡುತ್ತಾ ಅಲ್ಲಿನ ಬಯಲಿನಲ್ಲಿ ವ್ಯಾಪಿಸಿಕೊಂಡಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇವನು ದಾವೀದನನ್ನು ಕರೆದುಕೊಂಡು ಅಲ್ಲಿಗೆ ಹೋದಾಗ, ಅವರು ಭೂಮಿಯ ಮೇಲೆ ಎಲ್ಲೆಲ್ಲಿಯೂ ಫಿಲಿಷ್ಟಿಯರ ದೇಶದಲ್ಲಿಯೂ, ಯೆಹೂದ ದೇಶದಲ್ಲಿಯೂ ವ್ಯಾಪಿಸಿಕೊಂಡು, ಸಮಸ್ತ ಕೊಳ್ಳೆ ತೆಗೆದುಕೊಂಡು ಬಂದುದರಿಂದ, ತಿಂದು ಕುಡಿದು ನಾಟ್ಯವಾಡಿಕೊಂಡಿದ್ದರು.