1 Samuel 30:19 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಏನೂ ಕಳೆದು ಹೋಗಿರಲಿಲ್ಲ. ಅವರು ತಮ್ಮ ಎಲ್ಲ ಮಕ್ಕಳನ್ನೂ ಮುದುಕರನ್ನೂ ಅವರ ಗಂಡುಹೆಣ್ಣು ಮಕ್ಕಳನ್ನೂ ಮತ್ತೆ ಪಡೆದುಕೊಂಡರು. ಅವರು ತಮ್ಮ ಬೆಲೆಬಾಳುವ ವಸ್ತುಗಳನ್ನೂ ಅಮಾಲೇಕ್ಯರು ತೆಗೆದುಕೊಂಡು ಹೋಗಿದ್ದ ಎಲ್ಲವನ್ನೂ ಮತ್ತೆ ಪಡೆದುಕೊಂಡರು. ಹೀಗೆ ದಾವೀದನು ಎಲ್ಲವನ್ನೂ ತೆಗೆದುಕೊಂಡು ಬಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಮಾಲೇಕ್ಯರು ಒಯ್ದಿದ್ದ ಚಿಕ್ಕ ದೊಡ್ಡ ಒಡವೆಗಳಾಗಲಿ, ಗಂಡು ಹೆಣ್ಣು ಮಕ್ಕಳಾಗಲಿ ಒಂದನ್ನೂ ಬಿಡದೆ ಎಲ್ಲವನ್ನೂ ತಿರುಗಿ ತೆಗೆದುಕೊಂಡು ಬಂದನು.
Kannada BSI Bible 2016
ಅವರು ತಕ್ಕೊಂಡು ಹೋದ ಕಿರಿಯರ ಹಿರಿಯರಲ್ಲಾದರೂ ಕುಮಾರ ಕುಮಾರ್ತೆಯರಲ್ಲಾದರೂ ಕೊಳ್ಳೆಯಾದ ಯಾವ ವಸ್ತು ಗಳಲ್ಲಾದರೂ ಒಂದೂ ಕೊರತೆ ಇಲ್ಲದ ಹಾಗೆ ದಾವೀ ದನು ಎಲ್ಲವನ್ನೂ ತಿರಿಗಿ ತಕ್ಕೊಂಡನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಮಾಲೇಕ್ಯರು ಒಯ್ದಿದ್ದ ಚಿಕ್ಕ ದೊಡ್ಡ ಒಡವೆಗಳಾಗಲಿ ಗಂಡುಹೆಣ್ಣು ಮಕ್ಕಳಾಗಲಿ ಒಂದನ್ನೂ ಬಿಡದೆ ಎಲ್ಲವನ್ನೂ ತಿರಿಗಿ ತೆಗೆದುಕೊಂಡು ಬಂದನು.
Kannada Bible (KNCL) BSI 2016
ಅಮಾಲೇಕ್ಯರು ಒಯ್ದಿದ್ದ ಚಿಕ್ಕ ದೊಡ್ಡ ಒಡವೆಗಳಾಗಲಿ, ಗಂಡು-ಹೆಣ್ಣು ಮಕ್ಕಳಾಗಲಿ ಒಂದನ್ನೂ ಬಿಡದೆ, ಎಲ್ಲವನ್ನೂ ತೆಗೆದುಕೊಂಡು ಬಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ತೆಗೆದುಕೊಂಡು ಹೋದ ಕಿರಿಯರಲ್ಲಾದರೂ, ಹಿರಿಯರಲ್ಲಾದರೂ, ಪುತ್ರರಲ್ಲಾದರೂ, ಪುತ್ರಿಯರಲ್ಲಾದರೂ, ಕೊಳ್ಳೆಯಾದ ಯಾವ ವಸ್ತುಗಳಲ್ಲಾದರೂ ಒಂದೂ ಕಡಿಮೆ ಇಲ್ಲದ ಹಾಗೆ, ದಾವೀದನು ಎಲ್ಲವನ್ನು ತಿರುಗಿ ತೆಗೆದುಕೊಂಡು ಬಂದನು.