1 Samuel 30:23 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದಾವೀದನು, “ನನ್ನ ಸಹೋದರರೇ, ಆ ರೀತಿ ಮಾಡಬೇಡಿ! ಯೆಹೋವನು ನಮಗೆ ದಯಪಾಲಿಸಿರುವುದನ್ನು ಕುರಿತು ಯೋಚಿಸಿ! ನಮ್ಮ ಮೇಲೆ ಧಾಳಿಮಾಡಿದ ಶತ್ರುಗಳನ್ನು ಸೋಲಿಸಲು ಯೆಹೋವನು ನಮ್ಮನ್ನು ನೇಮಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ದಾವೀದನು ಅವರಿಗೆ, “ಸಹೋದರರೇ, ಯೆಹೋವನು ನಮ್ಮನ್ನು ಕಾಪಾಡಿ ನಮಗೆ ವಿರೋಧವಾಗಿ ಬಂದಿದ್ದ ಶತ್ರುಗಳ ಗುಂಪನ್ನು ನಮ್ಮ ಕೈಗೆ ಒಪ್ಪಿಸಿ ನಮಗೆ ಇಷ್ಟನ್ನೆಲ್ಲಾ ಕೊಟ್ಟ ಮೇಲೆ ನೀವು ಹೀಗೆ ಮಾಡಬಾರದು.
Kannada BSI Bible 2016
ಅದಕ್ಕೆ ದಾವೀದನು--ನನ್ನ ಸಹೋದರರೇ, ನಮ್ಮನ್ನು ಕಾಪಾಡಿ ನಮಗೆ ವಿರೋಧವಾಗಿ ಬಂದ ಈ ಗುಂಪನ್ನು ನಮ್ಮ ಕೈಯಲ್ಲಿ ಒಪ್ಪಿಸಿ ಕೊಟ್ಟ ಕರ್ತನು ನಮಗೆ ಕೊಟ್ಟದ್ದಕ್ಕೆ ನೀವು ಹಾಗೆ ಮಾಡಬೇಡಿರಿ. ಈ ಕಾರ್ಯಕ್ಕೋಸ್ಕರ ನಿಮ್ಮ ಮಾತನ್ನು ಯಾರು ಕೇಳುವರು?
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ದಾವೀದನು ಅವರಿಗೆ - ಸಹೋದರರೇ, ಯೆಹೋವನು ನಮ್ಮನ್ನು ಕಾಪಾಡಿ ನಮಗೆ ವಿರೋಧವಾಗಿ ಬಂದಿದ್ದ ಶತ್ರುಗಳ ಗುಂಪನ್ನು ನಮ್ಮ ಕೈಗೆ ಒಪ್ಪಿಸಿ ನಮಗೆ ಇಷ್ಟನ್ನೆಲ್ಲಾ ಕೊಟ್ಟ ಮೇಲೆ ನೀವು ಹೀಗೆ ಮಾಡಬಾರದು.
Kannada Bible (KNCL) BSI 2016
ಆಗ ದಾವೀದನು ಅವರಿಗೆ, “ಸಹೋದರರೇ, ಸರ್ವೇಶ್ವರ ನಮ್ಮನ್ನು ಕಾಪಾಡಿ, ನಮಗೆ ವಿರುದ್ಧ ಬಂದಿದ್ದ ಶತ್ರುಗಳ ಗುಂಪನ್ನು ನಮ್ಮ ಕೈಗೆ ಒಪ್ಪಿಸಿ, ನಮಗೆ ಇಷ್ಟನ್ನೆಲ್ಲಾ ಅನುಗ್ರಹಿಸಿದ ಮೇಲೆ ನೀವು ಹೀಗೆ ಮಾಡಬಾರದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದಕ್ಕೆ ದಾವೀದನು, “ನನ್ನ ಸಹೋದರರೇ, ನಮ್ಮನ್ನು ಕಾಪಾಡಿ ನಮಗೆ ವಿರೋಧವಾಗಿ ಬಂದ ಈ ಗುಂಪನ್ನು ನಮ್ಮ ಕೈಯಲ್ಲಿ ಒಪ್ಪಿಸಿಕೊಟ್ಟ ಯೆಹೋವ ದೇವರು ನಮಗೆ ಕೊಟ್ಟದ್ದಕ್ಕೆ ನೀವು ಹಾಗೆ ಮಾಡಬೇಡಿರಿ. ಈ ಕಾರ್ಯಕ್ಕೋಸ್ಕರ ನಿಮ್ಮ ಮಾತನ್ನು ಯಾರು ಕೇಳುವರು?