1 Samuel 6:20 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಈ ಪವಿತ್ರ ಪೆಟ್ಟಿಗೆಯನ್ನು ನೋಡಿಕೊಳ್ಳಬಲ್ಲ ಯಾಜಕನೆಲ್ಲಿದ್ದಾನೆ? ಈ ಪೆಟ್ಟಿಗೆಯು ಇಲ್ಲಿಂದ ಎಲ್ಲಿಗೆ ಹೋಗಬೇಕಾಗಿದೆ?” ಎಂದು ಬೇತ್‌ಷೆಮೆಷಿನ ಜನರು ಪ್ರಶ್ನಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಪರಿಶುದ್ಧ ದೇವರಾದ ಯೆಹೋವನ ಮುಂದೆ ಯಾರು ನಿಂತಾರು? ನಮ್ಮನ್ನು ಬಿಟ್ಟು ಈತನು ಹೋಗತಕ್ಕ ಸ್ಥಳ ಯಾವುದು ಎಂದು ಮಾತನಾಡಿಕೊಂಡು
Kannada BSI Bible 2016
ತಮ್ಮಲ್ಲಿ ದೊಡ್ಡ ಸಂಹಾರವಾಗಿ ಜನರನ್ನು ಕರ್ತನು ಸಾಯಿಸಿದ್ದರಿಂದ ಅವರು ದುಃಖಪಟ್ಟು--ಈ ಪರಿಶುದ್ಧ ದೇವರಾದ ಕರ್ತನ ಮುಂದೆ ನಿಲ್ಲತಕ್ಕವನಾರು? ನಮ್ಮ ಬಳಿಯಿಂದ ಆತನು ಹೋಗತಕ್ಕ ಸ್ಥಳ ಯಾವದು ಎಂದು ಹೇಳಿದರು.ಅವರು ಕಿರ್ಯತ್ಯಾರೀಮಿನ ನಿವಾಸಿಗಳಿಗೆ ದೂತ ರನ್ನು ಕಳುಹಿಸಿ--ಫಿಲಿಷ್ಟಿಯರು ಕರ್ತನ ಮಂಜೂಷ ವನ್ನು ತಿರಿಗಿ ಕಳುಹಿಸಿದ್ದಾರೆ; ನೀವು ಇಳಿದು ಬಂದು ಅದನ್ನು ನಿಮ್ಮ ಬಳಿಗೆ ತಕ್ಕೊಂಡು ಹೋಗಿರಿ ಎಂದು ಹೇಳಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಗಮ್ಯದೇವರಾದ ಯೆಹೋವನ ಮುಂದೆ ಯಾರು ನಿಂತಾರು? ಇನ್ನು ಮೇಲೆ ಈತನು ಹೋಗತಕ್ಕ ಸ್ಥಳವಾವದು ಎಂದು ಮಾತಾಡಿಕೊಂಡು
Kannada Bible (KNCL) BSI 2016
“ಪರಮಪಾವನ ದೇವರಾದ ಸರ್ವೆಶ್ವರನ ಮುಂದೆ ಯಾರು ತಾನೆ ನಿಂತಾರು? ಇನ್ನು ಮುಂದೆ ಇವರು ಹೋಗತಕ್ಕ ಸ್ಥಳ ಯಾವುದು?” ಎಂದು ಮಾತಾಡಿಕೊಂಡರು ಜನರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರು ತಮ್ಮಲ್ಲಿ ದೊಡ್ಡ ನಾಶನಮಾಡಿದ್ದರಿಂದ, ಬೇತ್ ಷೆಮೆಷ್ ಊರಿನವರು ದುಃಖಪಟ್ಟು, “ಈ ಪರಿಶುದ್ಧ ದೇವರಾದ ಯೆಹೋವ ದೇವರ ಮುಂದೆ ನಿಲ್ಲತಕ್ಕವನ್ಯಾರು? ಇಲ್ಲಿಂದ ಮಂಜೂಷವು ಎಲ್ಲಿಗೆ ಹೋಗುವುದು?” ಎಂದು ಹೇಳಿದರು.