1 Samuel 8:12 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ರಾಜನು ನಿಮ್ಮ ಮಕ್ಕಳನ್ನು ಯೋಧರನ್ನಾಗಿ ಮಾಡಿಕೊಳ್ಳುವನು. ಅವರಲ್ಲಿ ಕೆಲವರು ಒಂದು ಸಾವಿರ ಮಂದಿ ಸೈನಿಕರಿಗೆ ಅಧಿಕಾರಿಗಳಾಗಬಹುದು. ಇನ್ನು ಕೆಲವರು ಐವತ್ತು ಮಂದಿ ಸೈನಿಕರಿಗೆ ಅಧಿಕಾರಿಗಳಾಗಬಹುದು. ತನ್ನ ಭೂಮಿಯನ್ನು ಉಳಲು ಮತ್ತು ಪೈರನ್ನು ಕೊಯ್ಯಲು ರಾಜನು ನಿಮ್ಮ ಮಕ್ಕಳನ್ನು ತೆಗೆದುಕೊಳ್ಳುವನು; ಯುದ್ಧದ ಆಯುಧಗಳನ್ನು ತಯಾರಿಸಲೂ ತನ್ನ ರಥಕ್ಕೆ ಬೇಕಾದ ಸಾಮಾಗ್ರಿಗಳನ್ನು ತಯಾರಿಸಲೂ ಅವನು ಅವರನ್ನು ಬಳಸಿಕೊಳ್ಳುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕೆಲವರನ್ನು ಸಹಸ್ರಾಧಿಪತಿಗಳನ್ನಾಗಿಯೂ, ಕೆಲವರನ್ನು ಪಂಚಶತಾಧಿಪತಿಗಳನ್ನಾಗಿಯೂ ನೇಮಿಸುವನು. ಇನ್ನು ಕೆಲವರು ಅವನ ಭೂಮಿಯನ್ನು ಉಳುವವರೂ, ಪೈರನ್ನು ಕೊಯ್ಯುವವರೂ, ಯುದ್ಧಕ್ಕೆ ಬೇಕಾದ ಆಯುಧ, ರಥಸಾಮಾಗ್ರಿಗಳನ್ನು ಮಾಡುವವರೂ ಆಗಬೇಕು.
Kannada BSI Bible 2016
ಕೆಲ ವರು ಅವನ ರಥಗಳ ಮುಂದೆ ಓಡುವರು. ಸಾವಿರ ಜನಕ್ಕೆ ಅಧಿಪತಿಗಳಾಗಿಯೂ ಐವತ್ತು ಜನಕ್ಕೆ ಅಧಿಪತಿ ಗಳಾಗಿಯೂ ತನ್ನ ಭೂಮಿಯನ್ನು ಉಳುವವರಾ ಗಿಯೂ ತನ್ನ ಪೈರನ್ನು ಕೊಯ್ಯುವವರಾಗಿಯೂ ತನ್ನ ಯುದ್ಧದ ಆಯುಧಗಳನ್ನು ತನ್ನ ರಥದ ಸಾಮಾನು ಗಳನ್ನು ಮಾಡುವವರಾಗಿಯೂ ನೇಮಿಸುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕೆಲವರನ್ನು ಸಹಸ್ರಾಧಿಪತಿಗಳನ್ನಾಗಿಯೂ ಕೆಲವರನ್ನು ಪಂಚಶತಾಧಿಪತಿಗಳನ್ನಾಗಿಯೂ ನೇವಿುಸುವನು. ಇನ್ನು ಕೆಲವರು ಅವನ ಭೂವಿುಯನ್ನು ಉಳುವವರೂ ಪೈರನ್ನು ಕೊಯ್ಯುವವರೂ ಯುದ್ಧಾಯುಧ, ರಥಸಾಹಿತ್ಯ ಇವುಗಳನ್ನು ಮಾಡುವವರೂ ಆಗಬೇಕು.
Kannada Bible (KNCL) BSI 2016
ಕೆಲವರನ್ನು ಸಹಸ್ರಾಧಿಪತಿಗಳನ್ನಾಗಿಯೂ ಕೆಲವರನ್ನು ಪಂಚಾಶದಾಧಿಪತಿಗಳನ್ನಾಗಿಯೂ ನೇಮಿಸುವನು. ಇನ್ನು ಕೆಲವರು ಅವನ ಭೂಮಿಯನ್ನು ಉಳುವವರೂ, ಪೈರನ್ನು ಕೊಯ್ಯುವವರೂ, ಯುದ್ಧಾಯುಧ, ರಥಸಾಮಗ್ರಿಗಳನ್ನು ಮಾಡುವವರೂ ಆಗಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ಸಾವಿರ ಜನಕ್ಕೆ ಅಧಿಪತಿಗಳಾಗಿಯೂ ಐವತ್ತು ಜನಕ್ಕೆ ಅಧಿಪತಿಗಳಾಗಿಯೂ, ತನ್ನ ಭೂಮಿಯನ್ನು ಊಳುವವರಾಗಿಯೂ ತನ್ನ ಪೈರನ್ನು ಕೊಯ್ಯುವವರಾಗಿಯೂ ತನ್ನ ಯುದ್ಧದ ಆಯುಧಗಳನ್ನು ಹಾಗು ತನ್ನ ರಥಸಾಮಗ್ರಿಗಳನ್ನು ಮಾಡುವವರಾಗಿಯೂ ನೇಮಿಸುವನು.