1 Samuel 8:13 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ರಾಜನು ನಿಮ್ಮ ಹೆಣ್ಣುಮಕ್ಕಳನ್ನು ತೆಗೆದುಕೊಂಡು ತನಗಾಗಿ ಸುಗಂಧದ್ರವ್ಯಗಳನ್ನು ತಯಾರಿಸಲೂ ಅಡಿಗೆ ಮಾಡಲೂ ರೊಟ್ಟಿಸುಡುವುದಕ್ಕೂ ನೇಮಿಸಿಕೊಳ್ಳುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇದಲ್ಲದೆ ಅವನು ನಿಮ್ಮ ಹೆಣ್ಣುಮಕ್ಕಳನ್ನು ಸುಗಂಧದ್ರವ್ಯ ಮಾಡುವುದಕ್ಕೂ, ಅಡಿಗೆಮಾಡುವುದಕ್ಕೂ, ರೊಟ್ಟಿಸುಡುವುದಕ್ಕೂ ನೇಮಿಸಿಕೊಳ್ಳುವನು.
Kannada BSI Bible 2016
ಇದಲ್ಲದೆ ಅವನು ನಿಮ್ಮ ಕುಮಾರ್ತೆಯರನ್ನು ತೈಲ ಗಾರ್ತಿಗಳಾಗಿಯೂ ಅಡಿಗೆ ಮಾಡುವವರಾಗಿಯೂ ರೊಟ್ಟಿಸುಡುವವರಾಗಿಯೂ ಇಟ್ಟುಕೊಳ್ಳುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇದಲ್ಲದೆ ಅವನು ನಿಮ್ಮ ಹೆಣ್ಣುಮಕ್ಕಳನ್ನು ಸುಗಂಧದ್ರವ್ಯಮಾಡುವದಕ್ಕೂ ಅಡಿಗೆ ಮಾಡುವದಕ್ಕೂ ರೊಟ್ಟಿಸುಡುವದಕ್ಕೂ ನೇವಿುಸಿಕೊಳ್ಳುವನು.
Kannada Bible (KNCL) BSI 2016
ಇದಲ್ಲದೆ ಅವನು ನಿಮ್ಮ ಹೆಣ್ಣು ಮಕ್ಕಳನ್ನು ಪರಿಮಳದ್ರವ್ಯ ಮಾಡುವುದಕ್ಕೂ, ಅಡಿಗೆ ಮಾಡುವುದಕ್ಕೂ, ರೊಟ್ಟಿ ಸುಡುವುದಕ್ಕೂ ನೇಮಿಸಿಕೊಳ್ಳುವನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಅವನು ನಿಮ್ಮ ಪುತ್ರಿಯರನ್ನು ತೈಲಗಾರ್ತಿಗಳಾಗಿಯೂ, ಅಡುಗೆ ಮಾಡುವವರಾಗಿಯೂ ರೊಟ್ಟಿ ಸುಡುವವರಾಗಿಯೂ ಇಟ್ಟುಕೊಳ್ಳುವನು.