1 Samuel 9:14 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸೌಲನು ಮತ್ತು ಆ ಸೇವಕನು ಗುಡ್ಡವನ್ನು ಹತ್ತಿ ಪಟ್ಟಣದ ಕಡೆ ನಡೆದರು. ಅವರು ಪಟ್ಟಣವನ್ನು ಪ್ರವೇಶಿಸುತ್ತಿದ್ದಾಗ, ಸಮುವೇಲನು ಅವರ ಕಡೆ ಬರುತ್ತಿರುವುದನ್ನು ಕಂಡರು. ಸಮುವೇಲನು ಆಗ ತಾನೇ ಪಟ್ಟಣದಿಂದ ಹೊರಬಂದು, ಆರಾಧನೆಯ ಸ್ಥಳದ ಕಡೆ ಹೊರಟಿದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ಮೇಲೆ ಹತ್ತಿ ಊರಿಗೆ ಬಂದಾಗ ಸಮುವೇಲನು ಗುಡ್ಡಕ್ಕೆ ಹೋಗುವುದಕ್ಕೋಸ್ಕರ ಹೊರಟು ಅವರೆದುರಿಗೆ ಬಂದನು.
Kannada BSI Bible 2016
ಅವರು ಪಟ್ಟಣಕ್ಕೆ ಏರಿ ಹೋದರು. ಅವರು ಪಟ್ಟಣದಲ್ಲಿ ಪ್ರವೇಶಿಸಿದಾಗ ಇಗೋ, ಸಮುವೇಲನು ಗುಡ್ಡದ ಮೇಲೆ ಏರಿ ಹೋಗು ವದಕ್ಕೆ ಅವರಿಗೆದುರಾಗಿ ಹೊರಟು ಬಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ಮೇಲೆ ಹತ್ತಿ ಊರಿಗೆ ಬಂದಾಗ ಸಮುವೇಲನು ಗುಡ್ಡಕ್ಕೆ ಹೋಗುವದಕ್ಕೋಸ್ಕರ ಹೊರಟು ಅವರೆದುರಿಗೆ ಬಂದನು.
Kannada Bible (KNCL) BSI 2016
ಅವರು ಗುಡ್ಡ ಹತ್ತಿ ಊರಿಗೆ ಬಂದಾಗ ಸಮುವೇಲನು ಗುಡ್ಡಕ್ಕೆ ಹೊರಟು ಅವರೆದುರಿಗೆ ಬಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ಪಟ್ಟಣಕ್ಕೆ ಹೋದರು. ಅವರು ಪಟ್ಟಣದಲ್ಲಿ ಪ್ರವೇಶಿಸಿದಾಗ, ಸಮುಯೇಲನು ಗುಡ್ಡದ ಮೇಲಕ್ಕೆ ಏರಿ ಹೋಗುವುದಕ್ಕೆ ಅವರಿಗೆದುರಾಗಿ ಹೊರಟುಬಂದನು.