1 Samuel 9:19 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸಮುವೇಲನು, “ನಾನೇ ಆ ದರ್ಶಿ. ನನ್ನೊಡನೆ ಆರಾಧನೆಯ ಸ್ಥಳಕ್ಕೆ ಬಾ. ನೀನು ಮತ್ತು ನಿನ್ನ ಸೇವಕ ಈ ದಿನ ನನ್ನ ಜೊತೆಯಲ್ಲಿ ಊಟಮಾಡಬೇಕು. ನಾನು ನಿಮ್ಮನ್ನು ನಾಳೆ ಬೆಳಿಗ್ಗೆ ನಿಮ್ಮ ಮನೆಗೆ ಕಳುಹಿಸುತ್ತೇನೆ. ನಿಮ್ಮ ಪ್ರಶ್ನೆಗಳಿಗೆಲ್ಲ ಉತ್ತರ ಕೊಡುತ್ತೇನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀನು ನನ್ನ ಜೊತೆಯಲ್ಲಿ ಗುಡ್ಡಕ್ಕೆ ಬಾ; ನೀವು ಈ ಹೊತ್ತು ನನ್ನ ಸಂಗಡ ಊಟಮಾಡಬೇಕು. ನಿನ್ನ ಚಿಂತೆಯನ್ನೆಲ್ಲಾ ಪರಿಹರಿಸಿ ನಾಳೆ ಬೆಳಿಗ್ಗೆ ನಿನ್ನನ್ನು ಕಳುಹಿಸಿಕೊಡುವೆನು.
Kannada BSI Bible 2016
ಸಮುವೇಲನು ಸೌಲನಿಗೆ ಪ್ರತ್ಯುತ್ತ ರವಾಗಿ--ದರ್ಶಿಯು ನಾನೇ; ನೀನು ನನ್ನ ಮುಂದೆ ಗುಡ್ಡದ ಮೇಲಕ್ಕೆ ಏರಿ ಹೋಗು, ಈ ಹೊತ್ತು ನೀವು ನನ್ನ ಸಂಗಡ ತಿನ್ನಬೇಕು; ನಾಳೆ ಹೊತ್ತಾರೆ ನಿಮ್ಮನ್ನು ಕಳುಹಿಸುವೆನು; ನಿಮ್ಮ ಹೃದಯದಲ್ಲಿರುವದನ್ನೆಲ್ಲಾ ನಿಮಗೆ ತಿಳಿಯಪಡಿಸುವೆನು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನೇ ದರ್ಶಿಯು; ನೀನು ನನ್ನ ಜೊತೆಯಲ್ಲಿ ಗುಡ್ಡಕ್ಕೆ ಬಾ; ನೀವು ಈ ಹೊತ್ತು ನನ್ನ ಸಂಗಡ ಊಟಮಾಡಬೇಕು. ನಿನ್ನ ಚಿಂತೆಯನ್ನೆಲ್ಲಾ ಪರಿಹರಿಸಿ ನಾಳೆ ಬೆಳಿಗ್ಗೆ ನಿನ್ನನ್ನು ಕಳುಹಿಸಿಕೊಡುವೆನು.
Kannada Bible (KNCL) BSI 2016
ಸಮುವೇಲನು, “ನಾನೇ ಆ ದಾರ್ಶನಿಕ; ನೀನು ನನ್ನ ಜೊತೆ ಗುಡ್ಡಕ್ಕೆ ಬಾ; ನೀನು ಈ ಹೊತ್ತು ನನ್ನ ಸಂಗಡ ಊಟಮಾಡಬೇಕು. ನಿನ ಚಿಂತೆಯನ್ನೆಲ್ಲಾ ಪರಿಹರಿಸಿ ನಾಳೆ ಬೆಳಿಗ್ಗೆ ನಿನ್ನನ್ನು ಕಳುಹಿಸಿಕೊಡುವೆನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸಮುಯೇಲನು ಸೌಲನಿಗೆ ಉತ್ತರವಾಗಿ, “ದರ್ಶಿಯು ನಾನೇ, ನೀನು ನನ್ನ ಮುಂದೆ ಗುಡ್ಡದ ಮೇಲಕ್ಕೆ ಏರಿ ಹೋಗು. ಈ ಹೊತ್ತು ನೀನು ನನ್ನ ಸಂಗಡ ಊಟಮಾಡಬೇಕು, ನಾಳೆ ಹೊತ್ತಾರೆ ನಿನ್ನನ್ನು ಕಳುಹಿಸುವೆನು. ನಿನ್ನ ಹೃದಯದಲ್ಲಿರುವುದನ್ನೆಲ್ಲಾ ನಿನಗೆ ತಿಳಿಯಪಡಿಸುವೆನು.