1 Samuel 9:20 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಮೂರು ದಿನಗಳ ಹಿಂದೆ ಕಳೆದು ಹೋದ ನಿನ್ನ ಕತ್ತೆಗಳಿಗಾಗಿ ಚಿಂತಿಸಬೇಡ. ಅವುಗಳೆಲ್ಲ ಸಿಕ್ಕಿವೆ. ಈಗ ಇಸ್ರೇಲರಿಗೆಲ್ಲ ನೀನು ಬೇಕಾಗಿರುವೆ. ಅವರಿಗೆ ನೀನು ಮತ್ತು ನಿನ್ನ ತಂದೆಯ ಕುಟುಂಬದ ಜನರೆಲ್ಲ ಬೇಕಾಗಿದ್ದಾರೆ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮೂರು ದಿನಗಳ ಹಿಂದೆ ತಪ್ಪಿಸಿಕೊಂಡ ನಿನ್ನ ಕತ್ತೆಗಳಿಗೋಸ್ಕರ ಚಿಂತೆಮಾಡಬೇಡ; ಅವು ಸಿಕ್ಕಿವೆ. ಇಸ್ರಾಯೇಲರ ಅಭಿಲಾಷೆಯೆಲ್ಲಾ ಯಾರ ಮೇಲೆ ಇರುವುದು, ನಿನ್ನ ಮತ್ತು ನಿನ್ನ ತಂದೆಯ ಕುಟುಂಬದವರಿಗೂ ಸಲ್ಲುವುದು” ಎಂದು ಹೇಳಿದನು.
Kannada BSI Bible 2016
ಇಂದಿಗೆ ಮೂರನೇ ದಿವಸದಲ್ಲಿ ಕಾಣದೆ ಹೋದ ನಿನ್ನ ಕತ್ತೆಗಳ ಮೇಲೆ ನಿನ್ನ ಹೃದಯ ಇಡಬೇಡ; ಯಾಕಂದರೆ ಅವು ದೊರಕಿದವು. ಇದಲ್ಲದೆ ಇಸ್ರಾಯೇಲಿನ ಅಭಿಲಾಷೆ ಯೆಲ್ಲಾ ಯಾರ ಮೇಲೆ ಇರುವದು? ನಿನ್ನ ಮೇಲೆಯೂ ನಿನ್ನ ತಂದೆಯ ಮನೆಯವರೆಲ್ಲರ ಮೇಲೆಯೂ ಅಲ್ಲವೋ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮೂರು ದಿವಸಗಳ ಹಿಂದೆ ತಪ್ಪಿಸಿಕೊಂಡ ನಿನ್ನ ಕತ್ತೆಗಳಿಗೋಸ್ಕರ ಚಿಂತೆಮಾಡಬೇಡ; ಅವು ಸಿಕ್ಕಿವೆ. ಮತ್ತು ಇಸ್ರಾಯೇಲ್ಯರ ಶ್ರೇಷ್ಠವಸ್ತುಗಳೆಲ್ಲಾ ನಿನಗೂ ನಿನ್ನ ಕುಟುಂಬದವರಿಗೂ ಸಲ್ಲುವವಲ್ಲವೋ ಅಂದನು.
Kannada Bible (KNCL) BSI 2016
ಮೂರು ದಿವಸಗಳ ಹಿಂದೆ ತಪ್ಪಿಸಿಕೊಂಡ ನಿನ್ನ ಕತ್ತೆಗಳಿಗಾಗಿ ಚಿಂತೆ ಮಾಡಬೇಡ; ಅವು ಈಗಾಗಲೇ ಸಿಕ್ಕಿವೆ. ಮತ್ತು ಇಸ್ರಯೇಲರ ಆಶೋತ್ತರವೆಲ್ಲ ನಿನಗೂ ನಿನ್ನ ಕುಟುಂಬದವರಿಗೂ ಸಲ್ಲುವವಲ್ಲವೇ?” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಂದಿಗೆ ಮೂರನೆಯ ದಿವಸದಲ್ಲಿ ಕಾಣದೆ ಹೋದ ನಿನ್ನ ಕತ್ತೆಗಳಿಗಾಗಿ ಚಿಂತೆ ಮಾಡಬೇಡ. ಏಕೆಂದರೆ ಅವು ದೊರಕಿದವು. ಇದಲ್ಲದೆ ಇಸ್ರಾಯೇಲಿನ ಅಭಿಲಾಷೆಯೆಲ್ಲಾ ಯಾರ ಮೇಲೆ ಇರುವುದು? ಅದು ನಿನ್ನ ಮೇಲೆಯೇ ಅಲ್ಲವೋ,” ಎಂದನು.