1 Samuel 9:26 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಮಾರನೆಯ ದಿನ ಬೆಳಗಿನ ಜಾವ, ಸಮುವೇಲನು ಮಾಳಿಗೆಯ ಮೇಲೆ ಮಲಗಿದ್ದ ಸೌಲನನ್ನು ಎಬ್ಬಿಸಿ, “ಎದ್ದೇಳು, ನಿನ್ನನ್ನು ಕಳುಹಿಸಿಕೊಡುತ್ತೇನೆ” ಎಂದು ಹೇಳಿದನು. ಸೌಲನು ಮೇಲೆದ್ದನು ಮತ್ತು ಸಮುವೇಲನೊಂದಿಗೆ ಮನೆಯಿಂದ ಹೊರಗೆ ಹೊರಟನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮರುದಿನ ಬೆಳಿಗ್ಗೆ ಸಮುವೇಲನು ಮಾಳಿಗೆಯ ಮೇಲೆ ಮಲಗಿದ್ದ ಸೌಲನನ್ನು, “ಏಳು, ನಿನ್ನನ್ನು ಕಳುಹಿಸಿ ಕೊಡುತ್ತೇನೆ” ಎಂದು ಎಬ್ಬಿಸಲು ಅವನು ಎದ್ದನು. ತರುವಾಯ ಅವರಿಬ್ಬರೂ ಹೊರಟು ಊರ ಹೊರಗೆ ಬಂದಾಗ
Kannada BSI Bible 2016
ಅವರು ಸೂರ್ಯೋದಯದಲ್ಲಿ ಎದ್ದು ಸಮುವೇಲನು ಸೌಲನನ್ನು ಮಾಳಿಗೆಯ ಮೇಲೆ ಕರೆದು--ಏಳು, ನಾನು ನಿನ್ನನ್ನು ಕಳುಹಿಸುತ್ತೇನೆ ಅಂದನು. ಹಾಗೆಯೇ ಸೌಲನು ಎದ್ದನು; ಆಗ ಸೌಲನೂ ಸಮುವೇಲನೂ ಇಬ್ಬರೂ ಹೊರಗೆ ಹೊರಟರು.ಊರಿನ ಹೊರಗೆ ಬರುತ್ತಿರುವಾಗ ಸಮುವೇಲನು ಸೌಲನಿಗೆ--ನಾನು ದೇವರ ವಾರ್ತೆಯನ್ನು ನಿನಗೆ ತಿಳಿಸುವ ಹಾಗೆ ಸ್ವಲ್ಪಹೊತ್ತು ನಿಲ್ಲು; ನಿನ್ನ ಸೇವಕನನ್ನು ನಮ್ಮ ಮುಂದೆ ಹೋಗಲು ಹೇಳು ಅಂದನು. (ಅವನು ಮುಂದೆ ಹೋದನು.)
Kannada BSI JV (ಕನ್ನಡ ಸತ್ಯವೇದವು J.V. (BSI))
ಮರುದಿನ ಬೆಳಿಗ್ಗೆ ಸಮುವೇಲನು ಮಾಳಿಗೆಯ ಮೇಲೆ ಮಲಗಿದ್ದ ಸೌಲನನ್ನು - ಏಳು, ನಿನ್ನನ್ನು ಸಾಗಕಳುಹಿಸುತ್ತೇನೆ ಎಂದು ಎಬ್ಬಿಸಲು ಅವನೆದ್ದನು. ತರುವಾಯ ಅವರಿಬ್ಬರೂ ಹೊರಟು ಊರ ಹೊರಗೆ ಬಂದಾಗ
Kannada Bible (KNCL) BSI 2016
ಮರುದಿನ ಬೆಳಿಗ್ಗೆ ಸಮುವೇಲನು ಮಾಳಿಗೆಯ ಮೇಲೆ ಮಲಗಿದ್ದ ಸೌಲನನ್ನು, “ಏಳು, ನಿನ್ನನ್ನು ಸಾಗಕಳಿಸುತ್ತೇನೆ,” ಎಂದು ಎಬ್ಬಿಸಲು, ಅವನೆದ್ದನು. ತರುವಾಯ ಅವರು ಇಬ್ಬರೂ ಹೊರಟು ಊರಹೊರಗೆ ಬಂದಾಗ ಸಮುವೇಲನು ಸೌಲನಿಗೆ,
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ಉದಯಕಾಲದಲ್ಲಿ ಸೂರ್ಯೋದಯದಲ್ಲಿ ಎದ್ದಾಗ, ಸಮುಯೇಲನು ಸೌಲನನ್ನು ಮಾಳಿಗೆಗೆ ಕರೆದು, “ಏಳು, ನಾನು ನಿನ್ನನ್ನು ಕಳುಹಿಸುತ್ತೇನೆ,” ಎಂದನು. ಹಾಗೆಯೇ ಸೌಲನು ಎದ್ದನು, ಆಗ ಸೌಲನೂ, ಸಮುಯೇಲನೂ ಇಬ್ಬರೂ ಹೊರಗೆ ಹೊರಟರು.