1 Samuel 9:7 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸೌಲನು ತನ್ನ ಸೇವಕನಿಗೆ, “ನಾವು ಪಟ್ಟಣದೊಳಗೆ ಹೋಗೋಣ, ಆದರೆ ಆ ಮನುಷ್ಯನಿಗೆ ಕೊಡಲು ನಮ್ಮಲ್ಲಿ ಏನೂ ಇಲ್ಲ. ನಮ್ಮ ಚೀಲದಲ್ಲಿದ್ದ ಆಹಾರವೆಲ್ಲ ಮುಗಿದಿದೆ. ಆ ದೇವರ ಮನುಷ್ಯನಿಗೆ ನೀಡಲು ನಮ್ಮಲ್ಲಿ ಕಾಣಿಕೆಯೂ ಇಲ್ಲ. ಹೀಗಾಗಿ ನಾವು ಅವನಿಗೆ ಏನು ಕೊಡಬೇಕು?” ಎಂದು ಕೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದಕ್ಕೆ ಸೌಲನು, “ನಾವು ಅವನ ಬಳಿಗೆ ಹೋಗಬೇಕಾದರೆ ಏನಾದರೂ ತೆಗೆದುಕೊಂಡು ಹೋಗಬೇಕು; ನಾವು ತಂದಿದ್ದ ಆಹಾರಸಾಮಗ್ರಿಯು ಮುಗಿದುಹೋಯಿತು. ಆ ದೇವರ ಮನುಷ್ಯನಿಗೆ ಕೊಡತಕ್ಕ ಕಾಣಿಕೆ ನಮ್ಮಲ್ಲಿಲ್ಲವಲ್ಲಾ; ಏನು ಕೊಡಬೇಕು?” ಎನ್ನಲು
Kannada BSI Bible 2016
ಆಗ ಸೌಲನು ತನ್ನ ಸೇವಕನಿಗೆ--ಇಗೋ, ನಾವು ಆ ಮನುಷ್ಯನ ಬಳಿಗೆ ಹೋದರೆ ಏನು ತಕ್ಕೊಂಡು ಹೋಗುವದು? ಯಾಕಂದರೆ ನಮ್ಮ ಹಸಿಬೆಗಳಲ್ಲಿ ಇರುವ ರೊಟ್ಟಿ ಮುಗಿದುಹೋಯಿತು. ದೇವರ ಮನುಷ್ಯನ ಬಳಿಗೆ ತಕ್ಕೊಂಡು ಹೋಗಲು ತಕ್ಕ ಕಾಣಿಕೆ ಇಲ್ಲ; ನಮ್ಮ ಬಳಿಯಲ್ಲಿ ಏನದೆ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದಕ್ಕೆ ಸೌಲನು - ನಾವು ಅವನ ಬಳಿಗೆ ಹೋಗಬೇಕಾದರೆ ಏನಾದರೂ ತೆಗೆದುಕೊಂಡು ಹೋಗಬೇಕು; ನಾವು ತಂದಿದ್ದ ಆಹಾರಸಾಮಗ್ರಿಯು ಮುಗಿದುಹೋಯಿತು. ಆ ದೇವರ ಮನುಷ್ಯನಿಗೆ ಕೊಡತಕ್ಕ ಕಾಣಿಕೆ ನಮ್ಮಲ್ಲಿಲ್ಲವಲ್ಲಾ; ಏನು ಕೊಡಬೇಕು ಎನ್ನಲು ಆಳು -
Kannada Bible (KNCL) BSI 2016
ಅದಕ್ಕೆ ಸೌಲನು, “ನಾವು ಅವನ ಬಳಿಗೆ ಹೋಗಬೇಕಾದರೆ ಏನಾದರೂ ತೆಗೆದುಕೊಂಡು ಹೋಗಬೇಕು; ನಾವು ತಂದಿದ್ದ ಆಹಾರಸಾಮಗ್ರಿ ಮುಗಿದುಹೋಯಿತು. ಆ ದೈವಪುರುಷನಿಗೆ ಕೊಡತಕ್ಕ ಕಾಣಿಕೆ ನಮ್ಮಲ್ಲಿ ಇಲ್ಲವಲ್ಲಾ;
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಸೌಲನು ತನ್ನ ಸೇವಕನಿಗೆ, “ನಾವು ಆ ಮನುಷ್ಯನ ಬಳಿಗೆ ಹೋದರೆ, ಏನು ತೆಗೆದುಕೊಂಡು ಹೋಗೋಣ? ನಮ್ಮ ಚೀಲಗಳಲ್ಲಿ ಇರುವ ರೊಟ್ಟಿ ಮುಗಿದು ಹೋಯಿತು. ದೇವರ ಮನುಷ್ಯನ ಬಳಿಗೆ ತೆಗೆದುಕೊಂಡು ಹೋಗಲು ತಕ್ಕ ಕಾಣಿಕೆ ಇಲ್ಲ. ನಮ್ಮ ಬಳಿಯಲ್ಲಿ ಏನಿದೆ?” ಎಂದನು.