1 Thessalonians 1:9 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಾವು ನಿಮ್ಮೊಡನೆ ಇದ್ದಾಗ ನೀವು ನಮ್ಮ ಬೋಧನೆಯನ್ನು ಹೃತ್ಪೂರ್ವಕವಾಗಿ ಸ್ವೀಕರಿಸಿಕೊ0ಡದ್ದರ ಕುರಿತಾಗಿಯೂ ವಿಗ್ರಹಾರಾಧನೆಯನ್ನು ನಿಲ್ಲಿಸಿ ಜೀವವುಳ್ಳ ಸತ್ಯದೇವರನ್ನು ಆರಾಧಿಸತೊಡಗಿದ್ದರ ಕುರಿತಾಗಿಯೂ ಅಲ್ಲಿನ ಜನರೆಲ್ಲರೂ ತಿಳಿಸುತ್ತಾರೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾವು ನಿಮ್ಮಲ್ಲಿಗೆ ಬಂದಾಗ ನೀವು ನಮ್ಮನ್ನು ಹೇಗೆ ಸ್ವಾಗತಿಸಿದಿರಿ; ನೀವು ವಿಗ್ರಹಗಳನ್ನು ತೊರೆದು ದೇವರ ಕಡೆಗೆ ತಿರುಗಿಕೊಂಡು ಜೀವಸ್ವರೂಪನಾದ ಸತ್ಯ ದೇವರನ್ನು ಸೇವಿಸುವವರಾಗಿದ್ದೀರಿ
Kannada BSI Bible 2016
ನಾವು ನಿಮ್ಮಲ್ಲಿ ಹೇಗೆ ಪ್ರವೇಶಿಸಿದೆವೆಂಬದನ್ನೂ ನೀವು ಹೇಗೆ ವಿಗ್ರಹಗಳನ್ನು ಬಿಟ್ಟುಬಿಟ್ಟು ದೇವರ ಕಡೆಗೆ ತಿರುಗಿಕೊಂಡು ಜೀವವುಳ್ಳ ಸತ್ಯದೇವರನ್ನು ಸೇವಿಸುವವರಾದಿರೆಂಬದನ್ನೂ ಅವರು ತಾವೇ ಹೇಳುತ್ತಾರೆ.ಇದಲ್ಲದೆ ಆತನು ಸತ್ತವರೊಳ ಗಿಂದ ಎಬ್ಬಿಸಿದಂಥ ಮತ್ತು ಪರಲೋಕದಿಂದ ಬರುವಂಥ ಆತನ ಕುಮಾರನನ್ನು ಎದುರು ನೋಡುವವರಾದಿರೆಂಬ ದನ್ನೂ ತಿಳಿಸುತ್ತಾರೆ. ಈ ಯೇಸುವು ಮುಂದೆ ಬರುವ ಕೋಪದಿಂದ ನಮ್ಮನ್ನು ತಪ್ಪಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾವು ನಿಮ್ಮಲ್ಲಿಗೆ ಬಂದಾಗ ನೀವು ಎಂಥ ಮನಸ್ಸಿನಿಂದ ನಮ್ಮ ಬೋಧನೆಯನ್ನು ಕೇಳಿದಿರೋ ಅದನ್ನು ಕುರಿತು ಅಲ್ಲಿಯ ಜನರು ತಾವೇ ಹೇಳುತ್ತಾರೆ. ಅದು ಮಾತ್ರವಲ್ಲದೆ ನೀವು ವಿಗ್ರಹಗಳನ್ನು ಬಿಟ್ಟುಬಿಟ್ಟು ದೇವರ ಕಡೆಗೆ ತಿರುಗಿಕೊಂಡು ಜೀವವುಳ್ಳ ಸತ್ಯದೇವರನ್ನು ಸೇವಿಸುವವರಾದಿರೆಂತಲೂ
Kannada Bible (KNCL) BSI 2016
ನಾವು ನಿಮ್ಮಲ್ಲಿಗೆ ಬಂದಾಗ, ನೀವು ನಮ್ಮನ್ನು ಹೇಗೆ ಸ್ವಾಗತಿಸಿದಿರಿ; ವಿಗ್ರಹಗಳನ್ನು ತೊರೆದು, ಸತ್ಯ ಹಾಗೂ ಜೀವಸ್ವರೂಪರಾದ ದೇವರ ಕಡೆಗೆ ಹೇಗೆ ಅಭಿಮುಖರಾದಿರಿ;
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಏಕೆಂದರೆ ನೀವು ನಮ್ಮನ್ನು ಹೇಗೆ ಸ್ವೀಕರಿಸಿದ್ದಿರೆಂಬುದನ್ನೂ ನೀವು ಹೇಗೆ ದೇವರಲ್ಲದವುಗಳನ್ನು ಬಿಟ್ಟುಬಿಟ್ಟು ದೇವರ ಕಡೆಗೆ ತಿರುಗಿಕೊಂಡು ಜೀವವುಳ್ಳ ಸತ್ಯದೇವರನ್ನು ಸೇವಿಸುವವರಾದಿರೆಂಬುದನ್ನೂ ಅವರು ತಾವೇ ವಿವರಿಸುತ್ತಾರೆ.