1 Thessalonians 3:2 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದುದರಿ0ದ ಅಥೆನ್ಸಿನಲ್ಲಿ ಉಳಿದುಕೊ0ಡು ತಿಮೊಥೆಯನನ್ನು ನಿಮ್ಮ ಬಳಿಗೆ ಕಳುಹಿಸಲು ತೀರ್ಮಾನಿಸಿದೆವು. ತಿಮೊಥೆಯನು ನಮ್ಮ ಸಹೋದರ. ಅವನು ದೇವರಿಗೋಸ್ಕರ ನಮ್ಮೊಡನೆ ಕೆಲಸ ಮಾಡುತ್ತಿದ್ದಾನೆ. ಕ್ರಿಸ್ತನ ವಿಷಯವಾದ ಸುವಾರ್ತೆಯನ್ನು ಜನರಿಗೆ ತಿಳಿಸಲು ಅವನು ನಮಗೆ ಸಹಾಯ ಮಾಡುತ್ತಿದ್ದಾನೆ. ನಿಮ್ಮ ನ0ಬಿಕೆಯನ್ನು ಬಲಗೊಳಿಸಲು ಮತ್ತು ನಿಮ್ಮನ್ನು ಸ0ತೈಸಲು ತಿಮೊಥೆಯನನ್ನು ಕಳುಹಿಸಿದ್ದೇವೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿಮ್ಮ ಮೇಲೆ ಬಂದಿರುವ ಸಂಕಟಗಳಲ್ಲಿ ಒಬ್ಬರೂ ಚಂಚಲರಾಗದಂತೆ ನಿಮ್ಮನ್ನು ದೃಢಪಡಿಸುವುದಕ್ಕೂ ನಿಮ್ಮ ನಂಬಿಕೆಯ ವಿಷಯವಾಗಿ ಉತ್ತೇಜನಪಡಿಸುವುದಕ್ಕೂ ನಮ್ಮ ಸಹೋದರನೂ, ಕ್ರಿಸ್ತನ ಸುವಾರ್ತೆಯ ಕಾರ್ಯದಲ್ಲಿ ದೇವರ ಸೇವಕನೂ ಆಗಿರುವ ತಿಮೊಥೆಯನನ್ನು ನಿಮ್ಮ ಬಳಿಗೆ ಕಳುಹಿಸಿದೆವು.
Kannada BSI Bible 2016
ನಿಮ್ಮನ್ನು ದೃಢಪಡಿಸುವದಕ್ಕೂ ನಿಮ್ಮ ನಂಬಿಕೆಯ ವೃದ್ಧಿಗಾಗಿ ನಿಮ್ಮನ್ನು ಆದರಿಸುವದಕ್ಕೂ ನಮ್ಮ ಸಹೋದರನೂ ದೇವರ ಸೇವಕನೂ ಕ್ರಿಸ್ತನ ಸುವಾರ್ತೆಯಲ್ಲಿ ನಮ್ಮ ಜೊತೆ ಸೇವಕನೂ ಆಗಿರುವ ತಿಮೊಥೆಯನನ್ನು ಕಳುಹಿಸಿದೆವು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿಮ್ಮ ಮೇಲೆ ಬಂದಿರುವ ಸಂಕಟಗಳಲ್ಲಿ ಒಬ್ಬರೂ ಚಂಚಲರಾಗದಂತೆ ನಿಮ್ಮನ್ನು ದೃಢಪಡಿಸುವದಕ್ಕೂ ನಿಮ್ಮ ನಂಬಿಕೆಯ ವೃದ್ಧಿಗಾಗಿ ಪ್ರಬೋಧಿಸುವದಕ್ಕೂ ನಮ್ಮ ಸಹೋದರನೂ ಕ್ರಿಸ್ತನ ಸುವಾರ್ತೆಯ ಉದ್ಯೋಗದಲ್ಲಿ ದೇವರ ಸೇವಕನೂ ಆಗಿರುವ ತಿಮೊಥೆಯನನ್ನು ನಿಮ್ಮ ಬಳಿಗೆ ಕಳುಹಿಸಿದೆವು.
Kannada Bible (KNCL) BSI 2016
ತಿಮೊಥೇಯನು ಯೇಸುಕ್ರಿಸ್ತರ ಶುಭಸಂದೇಶದ ಪ್ರಚಾರಕಾರ್ಯದಲ್ಲಿ ನಮ್ಮ ಸಹೋದರ ಹಾಗೂ ದೇವರ ದಾಸ; ನೀವು ವಿಶ್ವಾಸದಲ್ಲಿ ಅಚಲರಾಗಿ ನೆಲೆನಿಲ್ಲುವಂತೆ ಆತನು ನಿಮ್ಮನ್ನು ಉತ್ತೇಜಿಸುವನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿಮ್ಮನ್ನು ದೃಢಪಡಿಸುವುದಕ್ಕೂ ನಿಮ್ಮ ನಂಬಿಕೆಯ ವಿಷಯವಾಗಿ ನಿಮ್ಮನ್ನು ಉತ್ತೇಜಿಸುವುದಕ್ಕೂ ನಮ್ಮ ಸಹೋದರನೂ ದೇವರ ಸೇವಕನೂ ಯೇಸುಕ್ರಿಸ್ತರ ಸುವಾರ್ತೆಯಲ್ಲಿ ನಮ್ಮ ಜೊತೆ ಸೇವಕನೂ ಆಗಿರುವ ತಿಮೊಥೆಯನನ್ನು ಕಳುಹಿಸಿದೆವು.