1 Thessalonians 5:10 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಾವು ತನ್ನೊ0ದಿಗೆ ಜೀವಿಸಲೆ0ದು ಯೇಸು ನಮಗಾಗಿ ಸತ್ತನು. ಯೇಸು ಪ್ರತ್ಯಕ್ಷನಾದಾಗ, ನಾವು ಜೀವಿಸುತ್ತಿರುತ್ತೇವೋ ಇಲ್ಲವೆ ಸತ್ತಿರುತ್ತೇವೋ ಎ0ಬುದು ಮುಖ್ಯವಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾವು ಎಚ್ಚರವಾಗಿದ್ದರೂ ಸರಿಯೇ ಅಥವಾ ನಿದ್ರೆಯಲ್ಲಿದ್ದರೂ ಸರಿಯೇ, ತನ್ನ ಜೊತೆಯಲ್ಲಿಯೇ ಜೀವಿಸಬೇಕೆಂದು ಯೇಸು ನಮಗೋಸ್ಕರ ತನ್ನ ಪ್ರಾಣವನ್ನು ಕೊಟ್ಟನು.
Kannada BSI Bible 2016
ನಾವು ಎಚ್ಚರವಾಗಿ ದ್ದರೂ ಸರಿಯೇ, ನಿದ್ರೆಯಲ್ಲಿದ್ದರೂ ಸರಿಯೇ, ತನ್ನ ಜೊತೆಯಲ್ಲಿಯೇ ನಾವು ಜೀವಿಸಬೇಕೆಂದು ಆತನು ನಮಗೋಸ್ಕರ ಸತ್ತನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾವು ಎಚ್ಚರವಾಗಿದ್ದರೂ ಸರಿಯೇ ನಿದ್ರೆಯಲ್ಲಿದ್ದರೂ ಸರಿಯೇ, ತನ್ನ ಜೊತೆಯಲ್ಲಿಯೇ ಜೀವಿಸಬೇಕೆಂದು ಆತನು ನಮಗೋಸ್ಕರ ಸತ್ತನು.
Kannada Bible (KNCL) BSI 2016
ಯೇಸುಕ್ರಿಸ್ತರು ಮರಳಿ ಬರುವಾಗ, ನಾವು ಮೃತರಾಗಿದ್ದರೂ ಜೀವಂತವಾಗಿದ್ದರೂ ಅವರೊಡನೆಯೇ ನಾವು ಜೀವಿಸಬೇಕೆಂದೆ ನಮಗಾಗಿ ಅವರು ಸಾವನ್ನಪ್ಪಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾವು ಎಚ್ಚರವಾಗಿದ್ದರೂ ನಿದ್ರೆಯಲ್ಲಿದ್ದರೂ ತಮ್ಮ ಜೊತೆಯಲ್ಲಿಯೇ ನಾವು ಜೀವಿಸಬೇಕೆಂದು ಅವರು ನಮಗಾಗಿ ಸತ್ತರು.