1 Timothy 1:18 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ತಿಮೊಥೆಯನೇ, ನೀನು ನನಗೆ ಮಗನಂತಿರುವೆ. ನಾನು ನಿನಗೆ ಆಜ್ಞಾಪಿಸುವುದೇನೆಂದರೆ, ಮೊದಲು ನಿನ್ನ ವಿಷಯದಲ್ಲಿ ತಿಳಿಸಲಾದ ಪ್ರವಾದನೆಗಳಿಗೆ ಅನುಗುಣವಾಗಿ ನಂಬಿಕೆಯ ದಿವ್ಯ ಹೋರಾಟವನ್ನು ಮಾಡು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮಗನಾದ ತಿಮೊಥೆಯನೇ, ನಿನ್ನ ವಿಷಯದಲ್ಲಿ ಮೊದಲು ಉಂಟಾಗಿದ್ದ ಪ್ರವಾದನೆಗಳನ್ನು ನೆನಪಿಸಿಕೊಂಡು, ನೀನು ಅವುಗಳಿಂದ ಧೈರ್ಯಹೊಂದಿ ಒಳ್ಳೆಯ ಯುದ್ಧವನ್ನು ನಡೆಸಬೇಕೆಂದು ನಿನಗೆ ಆಜ್ಞಾಪಿಸುತ್ತಿದ್ದೇನೆ.
Kannada BSI Bible 2016
ಮಗನಾದ ತಿಮೊಥೆಯನೇ, ನಿನ್ನ ವಿಷಯದಲ್ಲಿ ಮುಂಚೆ ಉಂಟಾದ ಪ್ರವಾದನೆಗಳ ಪ್ರಕಾರ ನೀನು ಅವುಗಳಿಂದ ಒಳ್ಳೇ ಯುದ್ಧವನ್ನು ನಡಿಸಬೇಕೆಂದು ನಿನಗೆ ಆಜ್ಞಾಪಿಸುತ್ತೇನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಮಗನಾದ ತಿಮೊಥೆಯನೇ, ನಿನ್ನ ವಿಷಯದಲ್ಲಿ ಮುಂಚೆ ಉಂಟಾದ ಪ್ರವಾದನೆಗಳನ್ನು ನಾನು ನೆನಸಿ - ನೀನು ಅವುಗಳಿಂದ ಧೈರ್ಯಗೊಂಡು ಕ್ರೈಸ್ತರ ದಿವ್ಯಯುದ್ಧವನ್ನು ನಡಿಸಬೇಕೆಂದು ನಿನಗೆ ಆಜ್ಞಾಪನೆಮಾಡುತ್ತೇನೆ.
Kannada Bible (KNCL) BSI 2016
ತಿಮೊಥೇಯನೇ, ನನ್ನ ಕುಮಾರನೇ, ಹಿಂದೆ ನಿನ್ನ ಕುರಿತು ಮಾಡಲಾಗಿರುವ ಪ್ರವಾದನೆಗಳಿಗೆ ಅನುಗುಣವಾಗಿ ನಾನು ನಿನಗೆ ಕೊಡುವ ಆಜ್ಞೆ ಇದು: ಪ್ರವಾದನೆಗಳಿಂದ ಪ್ರೇರಣೆ ಪಡೆದು ದಿಟ್ಟಹೋರಾಟವನ್ನು ಮಾಡು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮಗನಾದ ತಿಮೊಥೆಯನೇ, ನಿನ್ನ ವಿಷಯವಾಗಿ ಮೊದಲು ಉಂಟಾದ ಪ್ರವಾದನೆಗಳ ಪ್ರಕಾರವೇ ನೀನು ಅವುಗಳಿಂದ ಒಳ್ಳೆಯ ಯುದ್ಧವನ್ನು ನಡಿಸಬೇಕೆಂದು ಈ ಆಜ್ಞೆಯನ್ನು ನಿನಗೆ ಒಪ್ಪಿಸುತ್ತೇನೆ.