1 Timothy 1:4 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಕಲ್ಪನಾಕಥೆಗಳಿಗೂ ಕೊನೆಯಿಲ್ಲದ ವಂಶಾವಳಿಗಳಿಗೂ ಗಮನಕೊಡಬಾರದೆಂದು ಅವರಿಗೆ ಆಜ್ಞಾಪಿಸು. ಆ ಸಂಗತಿಗಳು ವಾದವಿವಾದಗಳನ್ನು ಮಾತ್ರ ತರುತ್ತವೆ. ಅವುಗಳಿಂದ ದೇವರ ಕಾರ್ಯಕ್ಕೆ ಪ್ರಯೋಜನವೇನೂ ಇಲ್ಲ. ದೇವರ ಕಾರ್ಯವನ್ನು ನಂಬಿಕೆಯಿಂದ ಮಾಡಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕಲ್ಪಿತಕಥೆಗಳಿಗೂ, ಕೊನೆಮೊದಲಿಲ್ಲದ ವಂಶಾವಳಿಗಳಿಗೂ ಲಕ್ಷ್ಯ ಕೊಡಬಾರದೆಂತಲೂ, ಆಜ್ಞಾಪಿಸಬೇಕೆಂಬುದಾಗಿ ನಿನಗೆ ಖಂಡಿತವಾಗಿ ಹೇಳಿದ ಪ್ರಕಾರ ಈಗಲೂ ಹೇಳುತ್ತಿದೇನೆ. ಅಂತಹ ಕಥೆಗಳೂ, ವಂಶಾವಳಿಗಳೂ ವಿವಾದಕ್ಕೆ ಎಡೆಮಾಡಿಕೊಡುತ್ತದೆಯೇ ಹೊರತು ದೇವರ ಯೋಜನೆಗಳಿಗೆ ಅನುಕೂಲವಾಗಿರುವುದಿಲ್ಲ. ನಂಬಿಕೆಯಿಂದ ಮಾತ್ರ ಅದು ಸಾಧ್ಯವಾಗುತ್ತದೆ.
Kannada BSI Bible 2016
ಕಲ್ಪನಾ ಕಥೆ ಗಳಿಗೂ ಕೊನೆಯಿಲ್ಲದ ವಂಶಾವಳಿಗಳಿಗೂ ಲಕ್ಷ್ಯ ಕೊಡಬಾರದೆಂತಲೂ ಆಜ್ಞಾಪಿಸಬೇಕೆಂಬದಾಗಿ ನಾನು ನಿನಗೆ ಖಂಡಿತವಾಗಿ ಹೇಳಿದ ಪ್ರಕಾರ ಈಗಲೂ ಹೇಳುತ್ತೇನೆ. ಅಂಥ ಕಥೆಗಳೂ ವಂಶಾವಳಿಗಳೂ ವಿವಾದಕ್ಕೆ ಆಸ್ಪದವಾಗಿವೆಯೇ ಹೊರತು ನಂಬಿಕೆ ಯಿಂದುಂಟಾಗುವ ದೈವಭಕ್ತಿಯನ್ನು ವೃದ್ಧಿಮಾಡುವ
Kannada BSI JV (ಕನ್ನಡ ಸತ್ಯವೇದವು J.V. (BSI))
ಕಲ್ಪನಾಕಥೆಗಳಿಗೂ ಕೊನೆಮೊದಲಿಲ್ಲದ ವಂಶಾವಳಿಗಳಿಗೂ ಲಕ್ಷ್ಯಕೊಡಬಾರದೆಂತಲೂ ಆಜ್ಞಾಪಿಸಬೇಕೆಂಬದಾಗಿ ನಿನಗೆ ಖಂಡಿತವಾಗಿ ಹೇಳಿದ ಪ್ರಕಾರ ಈಗಲೂ ಹೇಳುತ್ತೇನೆ. ಅಂಥ ಕಥೆಗಳೂ ವಂಶಾವಳಿಗಳೂ ವಿವಾದಕ್ಕೆ ಆಸ್ಪದವಾಗಿವೆಯೇ ಹೊರತು ದೇವರು ನಿರ್ವಹಿಸುವ ಕೆಲಸಕ್ಕೆ ಅನುಕೂಲವಾಗಿಲ್ಲ; ಇದರಲ್ಲಿ ನಂಬಿಕೆಯೇ ಮುಖ್ಯವಾದದ್ದು.
Kannada Bible (KNCL) BSI 2016
ಕಟ್ಟುಕತೆಗಳಲ್ಲೂ ಕೊನೆಮೊದಲಿಲ್ಲದ ವಂಶಾವಳಿಗಳ ನಿರೂಪಣೆಗಳಲ್ಲೂ ಕಾಲಹರಣ ಮಾಡಬಾರದೆಂದು ಅವರಿಗೆ ಆಜ್ಞಾಪಿಸಬೇಕು. ಅಂಥ ಕತೆಗಳು, ವಂಶಾವಳಿಗಳು ಅನಗತ್ಯವಾದ ವಾದವಿವಾದಗಳಿಗೆ ಎಡೆಮಾಡುತ್ತವೆಯೇ ಹೊರತು ದೇವರ ಯೋಜನೆ ಕೈಗೂಡಲು ಅವು ಅನುಕೂಲವಾಗಿಲ್ಲ; ವಿಶ್ವಾಸದಿಂದ ಮಾತ್ರ ಅದು ಸಾಧ್ಯ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಕಟ್ಟುಕಥೆಗಳಿಗೂ ಕೊನೆಯಿಲ್ಲದ ವಂಶಾವಳಿಗಳಿಗೂ ಲಕ್ಷ್ಯ ಕೊಡಬಾರದೆಂತಲೂ ಕೆಲವರಿಗೆ ಆಜ್ಞಾಪಿಸಬೇಕೆಂದು ನಾನು ನಿನಗೆ ಖಂಡಿತವಾಗಿ ಹೇಳಿದಂತೆ ಈಗಲೂ ಹೇಳುತ್ತೇನೆ. ಅಂಥ ಕಥೆಗಳೂ ವಂಶಾವಳಿಗಳೂ ವಿವಾದಕ್ಕೆ ಆಸ್ಪದವಾಗಿವೆಯೇ ಹೊರತು ನಂಬಿಕೆಯಿಂದುಂಟಾಗುವ ದೇವರ ಕಾರ್ಯಭಾರವನ್ನು ವೃದ್ಧಿ ಮಾಡುವುದೇ ಇಲ್ಲ.