1 Timothy 1:9 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಧರ್ಮಶಾಸ್ತ್ರವನ್ನು ರೂಪಿಸಿದ್ದು ಒಳ್ಳೆಯವರಿಗಾಗಿಯಲ್ಲ ಎಂಬುದು ನಮಗೆ ತಿಳಿದಿದೆ. ಅದನ್ನು ರೂಪಿಸಿದ್ದು ಅದರ ವಿರುದ್ಧವಾಗಿ ನಡೆಯುವ ಮತ್ತು ಅದನ್ನು ಅನುಸರಿಸಲು ಒಪ್ಪದಿರುವ ಜನರಿಗಷ್ಟೇ. ದೇವರಿಗೆ ವಿರುದ್ಧವಾದ ಜನರಿಗೆ ಮತ್ತು ಪಾಪಿಷ್ಠರಿಗೆ, ಅಧರ್ಮಿಗಳಿಗೆ ಮತ್ತು ಪರಿಶುದ್ಧರಲ್ಲದವರಿಗೆ, ತಂದೆತಾಯಿಗಳನ್ನು ಕೊಲ್ಲುವವರಿಗೆ ಮತ್ತು ಕೊಲೆಗಾರರಿಗೆ,
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಧರ್ಮಶಾಸ್ತ್ರವು ನೀತಿವಂತರಿಗೋಸ್ಕರ ಅಲ್ಲ, ಆದರೆ ಅಕ್ರಮಗಾರರು, ಅವಿಧೇಯರು, ಭಕ್ತಿಹೀನರು, ಪಾಪಿಷ್ಠರು, ಅಪವಿತ್ರರು, ಪ್ರಾಪಂಚಿಕರು, ತಂದೆತಾಯಿಗಳನ್ನು ಕೊಲ್ಲುವವರು, ನರಹತ್ಯಮಾಡುವವರು,
Kannada BSI Bible 2016
ನ್ಯಾಯಪ್ರಮಾಣವು ನೀತಿ ವಂತರಿಗೋಸ್ಕರ ಅಲ್ಲ, ಆದರೆ ಅದು ಅಕ್ರಮ ಗಾರರಿಗೂ ಅವಿಧೇಯರಿಗೂ ಭಕ್ತಿಹೀನರಿಗೂ ಪಾಪಿಷ್ಠ ರಿಗೂ ಅಶುದ್ಧರಿಗೂ ಅಪವಿತ್ರಮಾಡುವವರಿಗೂ ತಂದೆತಾಯಿಗಳನ್ನು ಕೊಲ್ಲುವವರಿಗೂ ನರಹತ್ಯ ಮಾಡುವವರಿಗೂ
Kannada BSI JV (ಕನ್ನಡ ಸತ್ಯವೇದವು J.V. (BSI))
ಆದರೆ ಅದನ್ನು ಅದರ ಉದ್ದೇಶಕ್ಕೆ ತಕ್ಕ ಹಾಗೆ ಉಪಯೋಗಿಸಬೇಕು; ಅಂದರೆ ಅದು ಅಧರ್ಮಿಗಳು, ಅವಿಧೇಯರು, ಭಕ್ತಿಹೀನರು, ಪಾಪಿಷ್ಠರು, ದೇವಭಕ್ತಿಯಿಲ್ಲದವರು, ಪ್ರಾಪಂಚಿಕರು, ತಂದೆತಾಯಿಗಳನ್ನು ಹೊಡೆಯುವವರು, ನರಹತ್ಯಮಾಡುವವರು, ಜಾರರು, ಪುರುಷಗಾವಿುಗಳು, ನರಚೋರರು, ಸುಳ್ಳುಗಾರರು, ಅಬದ್ಧಪ್ರಮಾಣಿಕರು, ಸ್ವಸ್ಥಬೋಧನೆಗೆ ಪ್ರತಿಕೂಲವಾಗಿ ಬೇರೆ ಏನಾದರೂ ಇದ್ದರೆ ಅದನ್ನು ಮಾಡುವವರು, ಈ ಮೊದಲಾದ ಅನೀತಿವಂತರಿಗಾಗಿ ನೇಮಕವಾಗಿದೆಯೇ ಹೊರತು ನೀತಿವಂತರಿಗೆ ನೇಮಕವಾಗಿಲ್ಲವೆಂದು ತಿಳಿದು ಉಪಯೋಗಿಸಬೇಕು.
Kannada Bible (KNCL) BSI 2016
ಧರ್ಮಶಾಸ್ತ್ರದ ನಿರ್ಬಂಧನೆಗಳು ಸಜ್ಜನರಿಗಲ್ಲ; ಬದಲಿಗೆ ಅಕ್ರಮಿಗಳಿಗೆ, ಅವಿಧೇಯರಿಗೆ, ಅಧರ್ಮಿಗಳಿಗೆ, ಭಕ್ತಿಹೀನರಿಗೆ, ಪಾಪಿಗಳಿಗೆ, ಅಶುದ್ಧರಿಗೆ, ಪ್ರಾಪಂಚಿಕರಿಗೆ, ಹೆತ್ತವರನ್ನು ಹತ್ಯೆಮಾಡುವವರಿಗೆ ಮತ್ತು ಕೊಲೆಗಾರರಿಗೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿಯಮವು ನೀತಿವಂತರಿಗೋಸ್ಕರ ಅಲ್ಲ. ಬದಲಿಗೆ ಅದು ಅವಿಧೇಯರಿಗೆ, ಅಕ್ರಮಗಾರರಿಗೆ, ಭಕ್ತಿಹೀನರಿಗೆ, ಪಾಪಿಗಳಿಗೆ, ಅಶುದ್ಧರಿಗೆ, ಅಪವಿತ್ರರಿಗೆ, ತಂದೆತಾಯಿಗಳನ್ನು ಕೊಲ್ಲುವವರಿಗೆ, ಕೊಲೆಗಾರರಿಗೆ,