1 Timothy 3:16 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಿಸ್ಸಂದೇಹವಾಗಿಯೂ ನಮ್ಮ ಆರಾಧನಾಜೀವಿತದ ರಹಸ್ಯವು ಮಹೋನ್ನತವಾದದ್ದು:
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದೇವಭಕ್ತಿಗೆ ಆಧಾರವಾಗಿರುವ ಸತ್ಯಾರ್ಥದ ರಹಸ್ಯವು ಗಂಭೀರವಾದದ್ದೆಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ, ಅದೇನಂದರೆ, ಕ್ರಿಸ್ತನು ಶರೀರಧಾರಿಯಾಗಿ ಪ್ರತ್ಯಕ್ಷನಾದನು, ಆತ್ಮಸಂಬಂಧವಾಗಿ ಕ್ರಿಸ್ತನೇ ನೀತಿವಂತನೆಂದು ಪರಿಗಣಿಸಲ್ಪಟ್ಟನು, ದೇವದೂತರಿಗೆ ಕಾಣಿಸಿಕೊಂಡನು, ಅನ್ಯಜನರ ಮಧ್ಯದಲ್ಲಿ ಸಾರಲ್ಪಟ್ಟನು, ಲೋಕದಲ್ಲಿ ನಂಬಲ್ಪಟ್ಟನು, ಮಹಿಮೆಯೊಂದಿಗೆ ಪರಲೋಕಕ್ಕೆ ಎತ್ತಲ್ಪಟ್ಟನು.
Kannada BSI Bible 2016
ದೇವಭಕ್ತಿಯ ಮರ್ಮವು ಮಹತ್ವವುಳ್ಳದ್ದೆಂಬದು ತರ್ಕವಿಲ್ಲದ್ದು, ಅದು ಯಾವದಂದರೆ--ದೇವರು ಶರೀರಧಾರಿಯಾಗಿ ಪ್ರತ್ಯಕ್ಷನಾದನು; ಆತ್ಮಸಂಬಂಧವಾಗಿ ನೀತಿವಂತನೆಂದು ನಿರ್ಣಯಿಸಲ್ಪಟ್ಟನು; ದೂತ ರಿಗೆ ಕಾಣಿಸಿಕೊಂಡನು; ಅನ್ಯಜನರಿಗೆ ಸಾರಲ್ಪಟ್ಟನು; ಲೋಕದಲ್ಲಿ ನಂಬಲ್ಪಟ್ಟನು; ಮಹಿಮೆಗೆ ಸೇರಿಸಲ
Kannada BSI JV (ಕನ್ನಡ ಸತ್ಯವೇದವು J.V. (BSI))
ದೇವಭಕ್ತಿಗೆ ಆಧಾರವಾಗಿರುವ ಸತ್ಯಾರ್ಥವು ಗಂಭೀರವಾದದ್ದೆಂಬದಕ್ಕೆ ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ; ಅದೇನಂದರೆ - ಆತನು ಶರೀರಧಾರಿಯಾಗಿ ಪ್ರತ್ಯಕ್ಷನಾದನು; ಆತ್ಮ ಸಂಬಂಧವಾಗಿ ಆತನೇ ಎಂದು ಸ್ಥಾಪಿಸಲ್ಪಟ್ಟನು; ದೇವದೂತರಿಗೆ ಕಾಣಿಸಿಕೊಂಡನು; ಅನ್ಯಜನರಲ್ಲಿ ಪ್ರಸಿದ್ಧಿ ಮಾಡಲ್ಪಟ್ಟನು; ಲೋಕದಲ್ಲಿ ನಂಬಲ್ಪಟ್ಟನು; ಪ್ರಭಾವಸ್ಥಾನದಲ್ಲಿ ಸೇರಿಸಲ್ಪಟ್ಟನು.
Kannada Bible (KNCL) BSI 2016
ನಿಜವಾಗಿಯೂ ನಮ್ಮ ಧರ್ಮದ ನಿಗೂಢಾರ್ಥ ಶ್ರೇಷ್ಠವಾದದ್ದು ಎಂಬುದು ನಿಸ್ಸಂದೇಹವಾದ ವಿಷಯ. “ನರಮಾನವ ರೂಪದಲಿ ಪ್ರತ್ಯಕ್ಷನಾಗಿ ದೇವರಿಗೆ ಪ್ರಿಯನೆಂದು ಪವಿತ್ರಾತ್ಮನಿಂದ ಪ್ರಕಟಿತನಾಗಿ ದೇವದೂತರಿಗೆ ಪ್ರದರ್ಶಿತವಾಗಿ ಅನ್ಯಜನರಿಗೆ ಪ್ರಬೋಧಿತನಾಗಿ ಜಗದಲ್ಲೆಲ್ಲೂ ವಿಶ್ವಾಸಪಡೆದವನಾಗಿ ಸ್ವರ್ಗಕ್ಕೇರಿದಾತ ಮಹಿಮಾನ್ವಿತ ಯೇಸುಕ್ರಿಸ್ತ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಎಲ್ಲಾ ಪ್ರಶ್ನೆಗಳಿಂದ ಹೆಚ್ಚಾಗಿ ದೈವ ಭಕ್ತಿಯ ರಹಸ್ಯವು ದೊಡ್ಡದಾದದ್ದು ಅದು ಯಾವುದೆಂದರೆ: “ದೇವರು ಮನುಷ್ಯ ರೂಪದಲ್ಲಿ ಪ್ರತ್ಯಕ್ಷರಾದರು. ಆತ್ಮದಲ್ಲಿ ರುಜುಪಡಿಸಲಾದರು. ದೂತರಿಗೆ ಕಾಣಿಸಿಕೊಂಡರು, ಯೆಹೂದ್ಯರಲ್ಲದವರಿಗೆ ಸಾರಲಾದರು, ಲೋಕದಲ್ಲಿ ನಂಬಲಾದರು, ಮಹಿಮೆಗೆ ಒಯ್ಯಲಾದರು!”