1 Timothy 3:7 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸಭಾಧ್ಯಕ್ಷನು ಸಭೆಯಲ್ಲಿಲ್ಲದ ಜನರ ಗೌರವಕ್ಕೆ ಸಹ ಪಾತ್ರನಾಗಿರಬೇಕು. ಆಗ ಅವನು ಇತರರ ಟೀಕೆಗೆ ಗುರಿಯಾಗುವುದೂ ಇಲ್ಲ, ಸೈತಾನನ ವಂಚನೆಗೆ ಸಿಕ್ಕಿಬೀಳುವುದೂ ಇಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇದಲ್ಲದೆ ಅವನು ಹೊರಗಣವರಿಂದ ಒಳ್ಳೆಯವನೆನ್ನಿಸಿಕೊಂಡಿರಬೇಕು, ಇಲ್ಲದಿದ್ದರೆ ನಿಂದೆಗೆ ಗುರಿಯಾಗುವನು ಮತ್ತು ಸೈತಾನನ ತಂತ್ರಗಳೊಳಗೆ ಸಿಕ್ಕಿಬಿದ್ದಾನು.
Kannada BSI Bible 2016
ಇದಲ್ಲದೆ ಅವನು ನಿಂದೆಗೆ ಗುರಿ ಯಾಗದಂತೆಯೂ ಸೈತಾನನ ಉರ್ಲಿಗೆ ಸಿಕ್ಕಿಬೀಳ ದಂತೆಯೂ ಹೊರಗಿನವರಿಂದ ಒಳ್ಳೇಸಾಕ್ಷಿಯನ್ನು ಹೊಂದಿದವನಾಗಿರತಕ್ಕದ್ದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇದಲ್ಲದೆ ಅವನು ಹೊರಗಣವರಿಂದ ಒಳ್ಳೆಯವನೆನಿಸಿಕೊಂಡಿರಬೇಕು; ಇಲ್ಲದಿದ್ದರೆ ನಿಂದೆಗೆ ಗುರಿಯಾಗುವನು ಮತ್ತು ಸೈತಾನನ ಉರ್ಲಿನೊಳಗೆ ಸಿಕ್ಕಿಬಿದ್ದಾನು.
Kannada Bible (KNCL) BSI 2016
ಕ್ರೈಸ್ತರಲ್ಲದವರಿಂದಲೂ ಆತನು ಒಳ್ಳೆಯವನೆನಿಸಿಕೊಂಡಿರಬೇಕು. ಹೀಗಿದ್ದರೆ ಮಾತ್ರ ನಿಂದೆಗೊಳಗಾಗದೆ ಸೈತಾನನ ಕುತಂತ್ರಗಳಿಂದ ದೂರವಿರಬಲ್ಲನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಅವನು ನಿಂದೆಗೆ ಗುರಿಯಾಗದವನೂ ಸೈತಾನನ ಉರುಲಿಗೆ ಸಿಕ್ಕಿ ಬೀಳದವನೂ ಆಗಿದ್ದಾನೆಂಬ ಒಳ್ಳೆಯ ಸಾಕ್ಷಿಯನ್ನು ಹೊಂದಿದವನಾಗಿರಬೇಕು.