1 Timothy 5:13 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಇದಲ್ಲದೆ, ಅವರು ಮನೆಮನೆಗೆ ಅಲೆಯುತ್ತಾ ತಮ್ಮ ಕಾಲವನ್ನು ಕಳೆಯಲಾರಂಭಿಸುತ್ತಾರೆ; ಹರಟೆ ಮಾತುಗಳನ್ನಾಡುತ್ತಾ ಇತರರ ಜೀವನದಲ್ಲಿ ತಲೆಹಾಕಿ ಕಾಲಹರಣ ಮಾಡುತ್ತಾರೆ; ಹೇಳಬಾರದ ಸಂಗತಿಗಳನ್ನೆಲ್ಲ ಹೇಳುತ್ತಾರೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇದಲ್ಲದೆ ಅವರು ಮನೆಮನೆಗೆ ತಿರುಗಾಡುತ್ತಾ ಮೈಗಳ್ಳತನವನ್ನು ಕಲಿಯುತ್ತಾರೆ. ಮೈಗಳ್ಳರಾಗುವುದಲ್ಲದೆ, ಹರಟೆಮಾತನಾಡುವವರೂ, ಇತರರ ವಿಷಯಗಳಲ್ಲಿ ತಲೆ ಹಾಕುವವರೂ ಆಗಿ ಆಡಬಾರದ ಮಾತುಗಳನ್ನಾಡುತ್ತಾರೆ.
Kannada BSI Bible 2016
ಇದಲ್ಲದೆ ಅವರು ಮನೆಯಿಂದ ಮನೆಗೆ ತಿರುಗಾಡುತ್ತಾ ಮೈಗಳ್ಳತನವನ್ನು ಕಲಿಯುತ್ತಾರೆ; ಮೈಗಳ್ಳರಾಗುವದ ಲ್ಲದೆ ಹರಟೆ ಮಾತನ್ನಾಡುವರು ಮತ್ತು ಇತರರ ಕೆಲಸ ದಲ್ಲಿ ಕೈಹಾಕುವವರಾಗಿ ಆಡಬಾರದ ಮಾತುಗಳನ್ನಾಡು ತ್ತಾರೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಇದಲ್ಲದೆ ಅವರು ಮನೆಮನೆಗೆ ತಿರುಗಾಡುತ್ತಾ ಮೈಗಳ್ಳತನವನ್ನು ಕಲಿಯುತ್ತಾರೆ; ಮೈಗಳ್ಳರಾಗುವದಲ್ಲದೆ ಹರಟೆಮಾತಾಡುವವರೂ ಇತರರ ಕೆಲಸದಲ್ಲಿ ಕೈಹಾಕುವವರೂ ಆಗಿ ಆಡಬಾರದ ಮಾತುಗಳನ್ನಾಡುತ್ತಾರೆ.
Kannada Bible (KNCL) BSI 2016
ಇದಲ್ಲದೆ ಅವರು ಮನೆಮನೆಗಳನ್ನು ಸುತ್ತುತ್ತಾ ಅಲೆದಾಡುತ್ತಾ ಹರಟೆಮಲ್ಲರೂ ಸೋಮಾರಿಗಳೂ ಆಗಬಹುದು. ಇತರರ ವಿಷಯಗಳಲ್ಲಿ ತಲೆಹಾಕಬಹುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಅವರು ಮನೆಯಿಂದ ಮನೆಗೆ ತಿರುಗಾಡುತ್ತಾ ಸೋಮಾರಿತನವನ್ನು ಕಲಿಯುತ್ತಾರೆ. ಸೋಮಾರಿಗಳಾಗುವುದಷ್ಟೇ ಅಲ್ಲ, ಹರಟೆ ಮಾತನಾಡುವವರೂ ಇತರರ ಕೆಲಸದಲ್ಲಿ ತಲೆಹಾಕುವವರಾಗಿ ಆಡಬಾರದ ಮಾತುಗಳನ್ನಾಡುವವರೂ ಆಗುತ್ತಾರೆ.