1 Timothy 6:1 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಗುಲಾಮರು ತಮ್ಮ ಯಜಮಾನರಿಗೆ ಸಂಪೂರ್ಣ ಗೌರವ ಕೊಡಬೇಕು. ಆಗ ದೇವರ ಹೆಸರಾಗಲಿ ನಮ್ಮ ಉಪದೇಶವಾಗಲಿ ಟೀಕೆಗೆ ಗುರಿಯಾಗುವುದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದಾಸತ್ವ ನೊಗದ ಅಧೀನದಲ್ಲಿರುವವರು ತಮ್ಮ ಯಜಮಾನರನ್ನು ಪೂರ್ಣ ಗೌರವಕ್ಕೂ ಯೋಗ್ಯರೆಂದೆಣಿಸಲಿ, ಇಲ್ಲದಿದ್ದರೆ ದೇವರ ನಾಮಕ್ಕೂ ನಾವು ಹೊಂದಿರುವ ಉಪದೇಶಕ್ಕೂ ನಿಂದನೆ ಉಂಟಾಗುತ್ತದೆ.
Kannada BSI Bible 2016
ದೇವರ ನಾಮಕ್ಕೂ ಆತನ ಬೋಧನೆಗೂ ದೂಷಣೆ ಉಂಟಾಗದಂತೆ ನೊಗದ ಅಧೀನದಲ್ಲಿರುವ ಸೇವಕರೆಲ್ಲರೂ ತಮ್ಮ ಸ್ವಂತ ಯಜಮಾನರನ್ನೂ ಎಲ್ಲಾ ಮಾನಕ್ಕೂ ಯೋಗ್ಯರೆಂದೆ ಣಿಸಲಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ದಾಸರಾಗಿ ಮತ್ತೊಬ್ಬರ ಅಧೀನದಲ್ಲಿರುವವರು ತಮ್ಮ ಯಜಮಾನರನ್ನು ಎಲ್ಲಾ ಮಾನಕ್ಕೂ ಯೋಗ್ಯರೆಂದೆಣಿಸಲಿ; ಇಲ್ಲದಿದ್ದರೆ ದೇವರ ನಾಮಕ್ಕೂ ನಾವು ಹೊಂದಿರುವ ಉಪದೇಶಕ್ಕೂ ನಿಂದೆ ಉಂಟಾದೀತು.
Kannada Bible (KNCL) BSI 2016
ದಾಸ್ಯದಲ್ಲಿರುವವರು ತಮ್ಮ ಯಜಮಾನರನ್ನು ಎಲ್ಲಾ ವಿಧದಲ್ಲೂ ಗೌರವಿಸಬೇಕು. ಇಲ್ಲದಿದ್ದರೆ, ದೇವರ ಹೆಸರಿಗೂ ನಮ್ಮ ಬೋಧನೆಗೂ ಕಳಂಕವುಂಟಾಗುತ್ತದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದೇವರ ನಾಮವೂ ನಮ್ಮ ಬೋಧನೆಯೂ ದೂಷಣೆಗೆ ಗುರಿಯಾಗದಂತೆ ದಾಸತ್ವದ ನೊಗ ಹೊತ್ತಿರುವವರು ತಮ್ಮ ಸ್ವಂತ ಯಜಮಾನರನ್ನು ಪೂರ್ಣ ಗೌರವಕ್ಕೆ ಯೋಗ್ಯರೆಂದೆಣಿಸಲಿ.