2 Chronicles 1:2 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸೊಲೊಮೋನನು ಇಸ್ರೇಲರನ್ನೂ ಅಂದರೆ ನ್ಯಾಯಾಧಿಪತಿಗಳನ್ನೂ ಶತಾಧಿಪತಿಗಳನ್ನೂ ಸೇನಾಧಿಪತಿಗಳನ್ನೂ ಕುಲಪ್ರಧಾನರನ್ನೂ ಕರೆಯಿಸಿ ಅವರೊಂದಿಗೆ ಗಿಬ್ಯೋನಿನ ಉನ್ನತಸ್ಥಳಕ್ಕೆ ಹೋದನು. ದೇವದರ್ಶನಗುಡಾರವು ಅಲ್ಲಿತ್ತು. ಅರಣ್ಯದಲ್ಲಿ ಇಸ್ರೇಲರು ಪ್ರಯಾಣಿಸುತ್ತಿದ್ದಾಗ ಯೆಹೋವನ ಸೇವಕನಾದ ಮೋಶೆಯು ಗುಡಾರವನ್ನು ಮಾಡಿಸಿದ್ದನು. (Verses 2-3)
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಸೊಲೊಮೋನನು ಸಮಸ್ತ ಇಸ್ರಾಯೇಲರ ಶತಾಧಿಪತಿಗಳೊಂದಿಗೂ, ಸಹಸ್ರಾಧಿಪತಿಗಳೊಂದಿಗೂ, ನ್ಯಾಯಾಧಿಪತಿಗಳೊಂದಿಗೂ, ಗೋತ್ರ ಪ್ರಧಾನರಾದವರೊಂದಿಗೂ, ಇಸ್ರಾಯೇಲ್ ಪ್ರಭುಗಳೊಂದಿಗೂ ಮಾತನಾಡಿದನು.
Kannada BSI Bible 2016
ಸೊಲೊಮೋ ನನು ಸಮಸ್ತ ಇಸ್ರಾಯೇಲ್ಯರೊಡನೆಯೂ ಸಹಸ್ರ ಶತಾಧಿಪತಿಗಳೊಡನೆಯೂ ನ್ಯಾಯಾಧಿಪತಿಗಳೊ ಡನೆಯೂ ಪ್ರಧಾನ ಪಿತೃಗಳೊಡನೆಯೂ ಇಸ್ರಾಯೇಲಿನಲ್ಲಿರುವ ಸಮಸ್ತ ಪ್ರಭುಗಳೊಡನೆಯೂ ಮಾತ ನಾಡಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು ಎಲ್ಲಾ ಇಸ್ರಾಯೇಲ್ಯರನ್ನು ಅಂದರೆ ಅವರ ಶತಾಧಿಪತಿ ಸಹಸ್ರಾಧಿಪತಿಗಳನ್ನೂ ನ್ಯಾಯಾಧಿಪತಿಗಳನ್ನೂ ಗೋತ್ರಪ್ರಧಾನರಾದ ಇಸ್ರಾಯೇಲ್ ಪ್ರಭುಗಳನ್ನೂ ಕರಿಸಿಕೊಂಡು
Kannada Bible (KNCL) BSI 2016
ಅವನು ತನ್ನ ಸಹಸ್ರಾಧಿಪತಿಗಳನ್ನು, ಶತಾಧಿಪತಿಗಳನ್ನು, ಸರಕಾರದ ಎಲ್ಲ ಪದಾಧಿಕಾರಿಗಳನ್ನು ಹಾಗೂ ಇಸ್ರಯೇಲ್ ಕುಲಗೋತ್ರಗಳ ನಾಯಕರನ್ನು ಬರಮಾಡಿ, ಅವರ ಸಮೇತ ಗಿಬ್ಯೋನಿನಲ್ಲಿದ್ದ ಪೂಜಾಸ್ಥಳಕ್ಕೆ ಹೋದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಸೊಲೊಮೋನನು ಸಮಸ್ತ ಇಸ್ರಾಯೇಲರ ಶತಾಧಿಪತಿಗಳೊಂದಿಗೂ, ಸಹಸ್ರಾಧಿಪತಿಗಳೊಂದಿಗೂ, ನ್ಯಾಯಾಧಿಪತಿಗಳೊಂದಿಗೂ, ಪ್ರಧಾನರಾದವರೊಂದಿಗೂ, ಸಮಸ್ತ ಇಸ್ರಾಯೇಲರ ಪಿತೃಗಳ ಶ್ರೇಷ್ಠರಾದ ಸಮಸ್ತ ಪ್ರಭುಗಳೊಂದಿಗೂ ಮಾತನಾಡಿದನು.