2 Chronicles 11:23 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ರೆಹಬ್ಬಾಮನು ವಿವೇಕದಿಂದ ತನ್ನ ಗಂಡುಮಕ್ಕಳನ್ನು ಯೆಹೂದ ಮತ್ತು ಬೆನ್ಯಾಮೀನ್ ಪ್ರದೇಶಗಳಲ್ಲಿದ್ದ ಕೋಟೆಗಳುಳ್ಳ ಪಟ್ಟಣಗಳಲ್ಲಿರಿಸಿ ಅವರಿಗೆ ಬೇಕಾದಷ್ಟು ಆಹಾರವನ್ನು ಸರಬರಾಜು ಮಾಡಿಸಿದನು. ಅವರಿಗೆ ಅನೇಕ ಸ್ತ್ರೀಯರನ್ನು ಹೆಂಡತಿಯರನ್ನಾಗಿ ಒದಗಿಸಿಕೊಟ್ಟನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ತನ್ನ ಉಳಿದ ಎಲ್ಲಾ ಮಕ್ಕಳನ್ನು ಜಾಣತನದಿಂದ ವಿಂಗಡಿಸಿ, ಯೆಹೂದ ಬೆನ್ಯಾಮೀನ್ ಪ್ರದೇಶಗಳಲ್ಲಿದ್ದ ಕೋಟೆಕೊತ್ತಲುಗಳುಳ್ಳ ಆಯಾ ಪಟ್ಟಣಗಳಲ್ಲಿರಿಸಿ, ಅವರಿಗೆ ಬೇಕಾದಷ್ಟು ಆಹಾರವನ್ನು ಏರ್ಪಡಿಸಿ, ಅನೇಕ ಮಂದಿ ಹೆಂಡತಿಯರನ್ನೂ ಗೊತ್ತು ಮಾಡಿಕೊಟ್ಟನು.
Kannada BSI Bible 2016
ಅವನು ವಿವೇಕದಿಂದ ನಡೆದು ತನ್ನ ಎಲ್ಲಾ ಮಕ್ಕಳನ್ನು ಯೆಹೂದ ಬೆನ್ಯಾವಿಾ ನಿನ ದೇಶಗಳಲ್ಲಿರುವ ಎಲ್ಲಾ ಬಲವಾದ ಪಟ್ಟಣಗ ಳಲ್ಲಿ ಚದುರಿಸಿ ಅವರಿಗೆ ಬಹಳ ದವಸಧಾನ್ಯಗಳನ್ನು ಕೊಟ್ಟನು. ಆದರೆ ಹೆಂಡತಿಯರ ಸಮೂಹವನ್ನು ಆಶಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ತನ್ನ ಉಳಿದ ಎಲ್ಲಾ ಮಕ್ಕಳನ್ನು ಜಾಣತನದಿಂದ ವಿಂಗಡಿಸಿ ಯೆಹೂದ ಬೆನ್ಯಾಮೀನ್ ಪ್ರದೇಶಗಳಲ್ಲಿದ್ದ ಕೋಟೆಕೊತ್ತಲುಗಳುಳ್ಳ ಆಯಾ ಪಟ್ಟಣಗಳಲ್ಲಿಟ್ಟು ಅವರಿಗೆ ಬೇಕಾದಷ್ಟು ಆಹಾರವನ್ನು ಏರ್ಪಡಿಸಿ ಅನೇಕ ಮಂದಿ ಹೆಂಡತಿಯರನ್ನೂ ಗೊತ್ತು ಮಾಡಿಕೊಟ್ಟನು.
Kannada Bible (KNCL) BSI 2016
ತನ್ನ ಉಳಿದ ಎಲ್ಲ ಮಕ್ಕಳನ್ನು ಜಾಣತನದಿಂದ ವಿಂಗಡಿಸಿ ಯೆಹೂದ-ಬೆನ್ಯಾಮೀನ್ ಕುಲಪ್ರದೇಶಗಳಲ್ಲಿ ಇದ್ದ ಕೋಟೆ ಕೊತ್ತಲುಗಳಿಂದ ಕೂಡಿದ ಆಯಾ ಪಟ್ಟಣಗಳಲ್ಲಿಟ್ಟು, ಅವರಿಗೆ ಬೇಕಾದಷ್ಟು ಜೀವನಾಂಶವನ್ನು ಏರ್ಪಡಿಸಿ, ಹಲವಾರು ಹೆಂಡತಿಯರನ್ನೂ ಗೊತ್ತುಮಾಡಿಕೊಟ್ಟನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಅವನು ವಿವೇಕವಾಗಿ ನಡೆದು ತನ್ನ ಎಲ್ಲಾ ಮಕ್ಕಳನ್ನು ಯೆಹೂದ ಬೆನ್ಯಾಮೀನಿನ ದೇಶಗಳಲ್ಲಿ ಇರುವ ಎಲ್ಲಾ ಬಲವಾದ ಪಟ್ಟಣಗಳಲ್ಲಿ ಚದರಿಸಿ, ಅವರಿಗೆ ಬಹಳ ದವಸಧಾನ್ಯಗಳನ್ನು ಕೊಟ್ಟನು. ಅವರಿಗೆ ಅನೇಕ ಹೆಂಡತಿಯರನ್ನು ಕೊಟ್ಟನು.