2 Chronicles 12:2 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ರೆಹಬ್ಬಾಮನ ಆಳ್ವಿಕೆಯ ಐದನೆಯ ವರ್ಷದಲ್ಲಿ ಶೀಶಕನು ಬಂದು ಪಟ್ಟಣಕ್ಕೆ ಮುತ್ತಿಗೆ ಹಾಕಿದನು. ಶೀಶಕನು ಈಜಿಪ್ಟಿನ ರಾಜ. ರೆಹಬ್ಬಾಮನೂ ಯೆಹೂದ ಪ್ರಾಂತ್ಯದ ಜನರೂ ಯೆಹೋವನಿಗೆ ಅವಿಧೇಯರಾದದ್ದೇ ಈ ಮುತ್ತಿಗೆಗೆ ಕಾರಣ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ಯೆಹೋವನಿಗೆ ದ್ರೋಹಮಾಡಿದ್ದರಿಂದ ಅರಸನಾದ ರೆಹಬ್ಬಾಮನ ಆಳ್ವಿಕೆಯ ಐದನೆಯ ವರ್ಷದಲ್ಲಿ, ಐಗುಪ್ತದ ಅರಸನಾದ ಶೀಶಕನು, ಸೈನಿಕರನ್ನು ಕೂಡಿಸಿಕೊಂಡು ಯೆರೂಸಲೇಮಿಗೆ ವಿರುದ್ಧವಾಗಿ ಹೊರಟನು.
Kannada BSI Bible 2016
ರೆಹಬ್ಬಾಮನು ಅರಸನಾದ ಐದನೇ ವರುಷ ದಲ್ಲಿ ಏನಾಯಿತಂದರೆ, ಅವರು ಕರ್ತನಿಗೆ ವಿರೋಧ ವಾಗಿ ಅಪರಾಧ ಮಾಡಿದ್ದರಿಂದ ಐಗುಪ್ತದ ಅರಸನಾದ ಶೀಶಕನು ಯೆರೂಸಲೇಮಿಗೆ ವಿರೋಧವಾಗಿ ಬಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ಯೆಹೋವನಿಗೆ ದ್ರೋಹಿಗಳಾದದರಿಂದ ಅರಸನಾದ ರೆಹಬ್ಬಾಮನ ಆಳಿಕೆಯ ಐದನೆಯ ವರುಷದಲ್ಲಿ
Kannada Bible (KNCL) BSI 2016
ಸರ್ವೇಶ್ವರನಿಗೆ ದ್ರೋಹಿಗಳಾದರು. ಅರಸ ರೆಹಬ್ಬಾಮನ ಆಳ್ವಿಕೆಯ ಐದನೆಯ ವರ್ಷದಲ್ಲಿ
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ಯೆಹೋವ ದೇವರಿಗೆ ವಿಶ್ವಾಸದ್ರೋಹಮಾಡಿದ್ದರಿಂದ, ರೆಹಬ್ಬಾಮನು ಅರಸನಾದ ಐದನೆಯ ವರ್ಷದಲ್ಲಿ ಈಜಿಪ್ಟ್ ಅರಸನಾದ ಶೀಶಕನು ಯೆರೂಸಲೇಮಿನ ಮೇಲೆ ದಾಳಿಮಾಡಿದನು.