2 Chronicles 12:3 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಶೀಶಕನ ಬಳಿಯಲ್ಲಿ ಹನ್ನೆರಡು ಸಾವಿರ ರಥಗಳು, ಅರವತ್ತುಸಾವಿರ ರಾಹುತರು ಮತ್ತು ಲೆಕ್ಕಿಸಲಾರದಷ್ಟು ಸೈನಿಕರು ಇದ್ದರು. ಅವನ ಆ ದೊಡ್ಡ ಸೈನ್ಯದಲ್ಲಿ ಲಿಬ್ಯ, ಇಥಿಯೋಪ್ಯ ಮತ್ತು ಸುಕ್ಕೀಯ ದೇಶದ ಸಿಪಾಯಿಗಳಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸಾವಿರದ ಇನ್ನೂರು ರಥಗಳನ್ನೂ, ಅರುವತ್ತು ಸಾವಿರ ಮಂದಿ ರಾಹುತರನ್ನೂ, ಐಗುಪ್ತದಿಂದ ಅಸಂಖ್ಯರಾದ ಲೂಬ್ಯ, ಸುಕ್ಕೀಯ, ಕೂಷ್ಯ ಸೈನಿಕರನ್ನೂ ಕೂಡಿಸಿಕೊಂಡು ಯೆರೂಸಲೇಮಿಗೆ ವಿರುದ್ಧವಾಗಿ ಹೊರಟು,
Kannada BSI Bible 2016
ಅವನ ಸಂಗಡ ಸಾವಿರದ ಇನ್ನೂರು ರಥಗಳೂ ಅರವತ್ತು ಸಾವಿರ ರಾಹುತರೂ ಇದ್ದರು. ಇದಲ್ಲದೆ ತನ್ನ ಸಂಗಡ ಐಗುಪ್ತದಿಂದ ಬಂದ ಲೂಬ್ಯರೂ ಸುಕ್ಕೀಯರೂ ಕೂಷ್ಯರೂ ಲೆಕ್ಕವಿಲ್ಲದಷ್ಟು ಇದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಐಗುಪ್ತದ ಅರಸನಾದ ಶೀಶಕನು ಸಾವಿರದ ಇನ್ನೂರು ರಥಗಳನ್ನೂ ಅರುವತ್ತು ಸಾವಿರ ಮಂದಿ ರಾಹುತರನ್ನೂ ಐಗುಪ್ತದ ಅಸಂಖ್ಯರಾದ ಲೂಬ್ಯ ಸುಕ್ಕೀಯ ಕೂಷ್ಯ ಸೈನಿಕರನ್ನೂ ಕೂಡಿಸಿಕೊಂಡು ಯೆರೂಸಲೇವಿುಗೆ ವಿರೋಧವಾಗಿ ಹೊರಟು
Kannada Bible (KNCL) BSI 2016
ಈಜಿಪ್ಟಿನ ಅರಸ ಶೀಶಕನು, ಸಾವಿರದ ಇನ್ನೂರು ರಥಗಳನ್ನೂ ಅರವತ್ತು ಸಾವಿರ ಮಂದಿ ರಾಹುತರನ್ನೂ ಈಜಿಪ್ಟಿನ, ಲಿಬ್ಯದ, ಸುಕ್ಕೀಯದ ಹಾಗೂ ಕೂಷ್ಯದ ಅಸಂಖ್ಯ ಸೈನಿಕರನ್ನೂ ಕೂಡಿಸಿಕೊಂಡು ಜೆರುಸಲೇಮಿಗೆ ಹೊರಟುಬಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನ ಸಂಗಡ ಸಾವಿರದ ಇನ್ನೂರು ರಥಗಳೂ, ಅರವತ್ತು ಸಾವಿರ ರಾಹುತರೂ ಇದ್ದರು. ಇದಲ್ಲದೆ ತನ್ನ ಸಂಗಡ ಈಜಿಪ್ಟಿನಿಂದ ಬಂದ ಲಿಬಿಯದವರೂ, ಸುಕ್ಕೀಯರೂ, ಕೂಷ್ಯರೂ ಲೆಕ್ಕವಿಲ್ಲದಷ್ಟು ಬಂದರು.