2 Chronicles 12:7 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅರಸನೂ ಯೆಹೂದದ ನಾಯಕರೂ ತನ್ನೆದುರಿನಲ್ಲಿ ತಗ್ಗಿಸಿಕೊಂಡದ್ದನ್ನು ಯೆಹೋವನು ನೋಡಿ ಶೆಮಾಯನ ಮೂಲಕ ಈ ಸಂದೇಶವನ್ನು ಕಳುಹಿಸಿದನು. “ಅರಸನೂ ನಾಯಕರೂ ತಮ್ಮನ್ನು ತಗ್ಗಿಸಿಕೊಂಡದ್ದರಿಂದ ನಾನು ಅವರನ್ನು ನಾಶಪಡಿಸದೆ ಬೇಗನೆ ರಕ್ಷಿಸುವೆನು. ಜೆರುಸಲೇಮಿನ ಮೇಲೆ ನನ್ನ ಕೋಪವು ಸುರಿಯುವಂತೆ ನಾನು ಶೀಶಕನನ್ನು ಉಪಯೋಗಿಸುವದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನ ವಾಕ್ಯವು ಶೆಮಾಯನಿಗೆ, “ಇವರು ತಮ್ಮನ್ನು ತಗ್ಗಿಸಿಕೊಂಡಿದ್ದರಿಂದ ಇವರನ್ನು ಸಂಹರಿಸುವುದಿಲ್ಲ; ಸ್ವಲ್ಪ ಕಾಲದಲ್ಲಿಯೇ ಇವರಿಗೆ ರಕ್ಷಣೆಯನ್ನು ಅನುಗ್ರಹಿಸುವೆನು; ಶೀಶಕನ ಮುಖಾಂತರವಾಗಿ ನನ್ನ ರೌದ್ರವನ್ನು ಯೆರೂಸಲೇಮಿನ ಮೇಲೆ ಸುರಿದು ಬಿಡುವುದಿಲ್ಲ.
Kannada BSI Bible 2016
ಅವರು ತಮ್ಮನ್ನು ತಗ್ಗಿಸಿ ಕೊಂಡದ್ದನ್ನು ಕರ್ತನು ನೋಡಿದಾಗ ಕರ್ತನ ವಾಕ್ಯವು ಶೆಮಾಯನಿಗೆ ಉಂಟಾಯಿತು. ಏನಂದರೆಅವರು ತಮ್ಮನ್ನು ತಗ್ಗಿಸಿಕೊಂಡದ್ದರಿಂದ ನಾನು ಅವ ರನ್ನು ನಾಶಮಾಡದೆ ಅವರು ಸ್ವಲ್ಪಮಟ್ಟಿಗೆ ತಪ್ಪಿಸಿ ಕೊಳ್ಳುವಂತೆ ಮಾಡುವೆನು. ಶೀಶಕನ ಕೈಯಿಂದ ನನ್ನ ಕೋಪವು ಯೆರೂಸಲೇಮಿನ ಮೇಲೆ ಹೊಯ್ಯಲ್ಪಡು ವದಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನು ಇದನ್ನು ನೋಡಿ ಶೆಮಾಯನಿಗೆ - ಇವರು ತಮ್ಮನ್ನು ತಗ್ಗಿಸಿಕೊಂಡದ್ದರಿಂದ ಇವರನ್ನು ಸಂಹರಿಸುವದಿಲ್ಲ; ಸ್ವಲ್ಪ ಕಾಲದಲ್ಲಿಯೇ ಇವರಿಗೆ ರಕ್ಷಣೆಯನ್ನು ಅನುಗ್ರಹಿಸುವೆನು; ಶೀಶಕನ ಮುಖಾಂತರವಾಗಿ ನನ್ನ ರೌದ್ರವನ್ನು ಯೆರೂಸಲೇವಿುನ ಮೇಲೆ ಸುರಿದುಬಿಡುವದಿಲ್ಲ.
Kannada Bible (KNCL) BSI 2016
ಸರ್ವೇಶ್ವರ ಇದನ್ನು ನೋಡಿ ಶೆಮಾಯನಿಗೆ, “ಇವರು ತಮ್ಮನ್ನೇ ತಗ್ಗಿಸಿಕೊಂಡದ್ದರಿಂದ ಇವರನ್ನು ಸಂಹರಿಸುವುದಿಲ್ಲ; ಸ್ವಲ್ಪಕಾಲದಲ್ಲೇ ಇವರಿಗೆ ರಕ್ಷಣೆಯನ್ನು ಅನುಗ್ರಹಿಸುವೆನು; ಶೀಶಕನ ಮುಖಾಂತರ ನನ್ನ ರೌದ್ರವನ್ನು ಜೆರುಸಲೇಮಿನ ಮೇಲೆ ಸುರಿದುಬಿಡುವುದಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ತಮ್ಮನ್ನು ತಗ್ಗಿಸಿಕೊಂಡದ್ದನ್ನು ಯೆಹೋವ ದೇವರು ನೋಡಿದಾಗ, ಯೆಹೋವ ದೇವರ ವಾಕ್ಯವು ಶೆಮಾಯನಿಗೆ ಉಂಟಾಗಿ, “ಅವರು ತಮ್ಮನ್ನು ತಗ್ಗಿಸಿಕೊಂಡದ್ದರಿಂದ ನಾನು ಅವರನ್ನು ನಾಶಮಾಡದೆ, ಅವರು ತಪ್ಪಿಸಿಕೊಳ್ಳುವಂತೆ ಮಾಡುವೆನು. ಶೀಶಕನ ಮುಖಾಂತರ ನನ್ನ ಕೋಪವನ್ನು ಯೆರೂಸಲೇಮಿನ ಮೇಲೆ ಸುರಿದುಬಿಡುವುದಿಲ್ಲ.