2 Chronicles 13:10 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ನಮಗಾದರೋ ಯೆಹೋವನೇ ದೇವರು. ಯೆಹೂದ್ಯ ಪ್ರಾಂತ್ಯದವರಾದ ನಾವು ದೇವರ ಕಟ್ಟಳೆಗೆ ವಿಧೇಯರಾಗಲು ನಿರಾಕರಿಸಲಿಲ್ಲ. ನಾವು ಆತನನ್ನು ತೊರೆಯಲಿಲ್ಲ. ಆತನ ಸೇವೆಮಾಡಲು ಲೇವಿಯರು ಮತ್ತು ಆರೋನನ ಸಂತತಿಯವರಾದ ಯಾಜಕರು ಸಹಾಯ ಮಾಡುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಮಗಾದರೋ ಯೆಹೋವನು ದೇವರಾಗಿರುತ್ತಾನೆ; ನಾವು ಆತನನ್ನು ಬಿಡಲಿಲ್ಲ. ಯೆಹೋವನ ಆರಾಧನೆ ನಡೆಸಲು ಆರೋನನ ಸಂತಾನದವರಾದ ಯಾಜಕರೂ, ತಮಗೆ ನೇಮಕವಾದ ಕೆಲಸದಲ್ಲಿ ನಿರತರಾದ ಲೇವಿಯರೂ ನಮಗಿದ್ದಾರೆ.
Kannada BSI Bible 2016
ನಮಗಾದರೋ ಕರ್ತನು ನಮ್ಮ ದೇವರಾಗಿದ್ದಾನೆ; ನಾವು ಆತನನ್ನು ಬಿಡಲಿಲ್ಲ. ಇದಲ್ಲದೆ ಕರ್ತನಿಗೆ ಸೇವೆಮಾಡುವ ಯಾಜಕರು ಆರೋನನ ಮಕ್ಕಳು; ಲೇವಿಯರು ತಮ್ಮ ಕೆಲಸದಲ್ಲಿ ಇದ್ದಾರೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಮಗಾದರೋ ಯೆಹೋವನು ದೇವರಾಗಿರುತ್ತಾನೆ; ನಾವು ಆತನನ್ನು ಬಿಡಲಿಲ್ಲ. ಯೆಹೋವನ ಆರಾಧನೆ ನಡಿಸುವ ಆರೋನನ ಸಂತಾನದವರಾದ ಯಾಜಕರೂ ತಮಗೆ ನೇಮಕವಾದ ಕೆಲಸದಲ್ಲಿ ನಿರತರಾದ ಲೇವಿಯರೂ ನಮಗಿರುತ್ತಾರೆ.
Kannada Bible (KNCL) BSI 2016
ನಮಗಾದರೋ ಸರ್ವೇಶ್ವರನೊಬ್ಬನೇ ದೇವರು; ನಾವು ಅವರನ್ನು ಬಿಡಲಿಲ್ಲ. ಸರ್ವೇಶ್ವರನ ಆರಾಧನೆ ನಡೆಸಲು ಆರೋನನ ಸಂತಾನದವರಾದ ಯಾಜಕರು ಹಾಗೂ ತಮಗೆ ನೇಮಕವಾದ ಕೆಲಸದಲ್ಲಿ ನಿರತರಾದ ಲೇವಿಯರು ನಮಗಿರುತ್ತಾರೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ನಮಗಾದರೋ ಯೆಹೋವ ದೇವರು ದೇವರಾಗಿದ್ದಾರೆ. ನಾವು ಅವರನ್ನು ಬಿಡಲಿಲ್ಲ. ಇದಲ್ಲದೆ ಯೆಹೋವ ದೇವರಿಗೆ ಸೇವೆ ಮಾಡುವ ಯಾಜಕರು ಆರೋನನ ಮಕ್ಕಳು. ಲೇವಿಯರು ಅವರಿಗೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದರು.