2 Chronicles 13:12 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ದೇವರು ನಮ್ಮೊಂದಿಗಿದ್ದಾನೆ. ನಮ್ಮನ್ನು ಆಳುವವನು ಆತನೇ. ಅವನ ಯಾಜಕರು ನಮ್ಮೊಂದಿಗಿದ್ದಾರೆ. ದೇವರ ಯಾಜಕರು ತುತ್ತೂರಿಯನ್ನೂದಿ ನಿಮ್ಮನ್ನು ಆತನ ಬಳಿಗೆ ಬರಲು ಎಚ್ಚರಿಸುತ್ತಾರೆ. ಇಸ್ರೇಲರೇ, ನಿಮ್ಮ ಪೂರ್ವಿಕರ ದೇವರಾದ ಯೆಹೋವನ ಜನರೊಂದಿಗೆ ಕಾದಾಡಬೇಡಿರಿ. ನೀವು ಜಯಹೊಂದುವದಿಲ್ಲ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಗೋ, ದೇವರು ನಾಯಕನಾಗಿ ನಮ್ಮೊಂದಿಗಿದ್ದಾನೆ; ನಿಮಗೆ ವಿರುದ್ಧವಾಗಿ ಅರ್ಭಟದಿಂದ ಊದತಕ್ಕ ತುತ್ತೂರಿಗಳನ್ನು ಹಿಡಿದಿರುವ ಯಾಜಕರೂ ನಮ್ಮೊಂದಿಗಿದ್ದಾರೆ. ಇಸ್ರಾಯೇಲರೇ, ನಿಮ್ಮ ಪೂರ್ವಿಕರ ದೇವರಾದ ಯೆಹೋವನೊಡನೆ ಯುದ್ಧ ಮಾಡಬೇಡಿರಿ, ನೀವು ಜಯಿಸಲಾರಿರಿ” ಎಂದು ಕೂಗಿ ಹೇಳಿದನು.
Kannada BSI Bible 2016
ಇದಲ್ಲದೆ ನಿಮಗೆ ವಿರೋಧವಾಗಿ ಜಯಧ್ವನಿ ಮಾಡುವ ತುತೂರಿಗಳನ್ನು ಹಿಡುಕೊಂಡ ಆತನ ಯಾಜಕರು ಇದ್ದಾರೆ. ಇಸ್ರಾಯೇಲಿನ ಮಕ್ಕಳೇ, ನೀವು ನಿಮ್ಮ ಪಿತೃಗಳ ದೇವರಾದ ಕರ್ತನಿಗೆ ವಿರೋಧ ವಾಗಿ ಯುದ್ಧಮಾಡಬೇಡಿರಿ, ನೀವು ಜಯ ಹೊಂದು ವದಿಲ್ಲ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಗೋ, ದೇವರು ನಾಯಕನಾಗಿ ನಮ್ಮೊಂದಿಗಿರುತ್ತಾನೆ; ನಿಮಗೆ ವಿರೋಧವಾಗಿ ಆರ್ಭಟದಿಂದ ಊದತಕ್ಕ ತುತೂರಿಗಳನ್ನು ಹಿಡಿದಿರುವ ಯಾಜಕರೂ ನಮ್ಮೊಂದಿಗಿರುತ್ತಾರೆ. ಇಸ್ರಾಯೇಲ್ಯರೇ, ನಿಮ್ಮ ಪಿತೃಗಳ ದೇವರಾದ ಯೆಹೋವನೊಡನೆ ಯುದ್ಧ ಮಾಡಬೇಡಿರಿ, ನೀವು ಸಫಲರಾಗಲಿಕ್ಕಿಲ್ಲ ಎಂದು ಕೂಗಿ ಹೇಳಿದನು.
Kannada Bible (KNCL) BSI 2016
ಇಗೋ, ದೇವರೇ ನಾಯಕರಾಗಿ ನಮ್ಮೊಂದಿಗಿರುತ್ತಾರೆ; ನಿಮಗೆ ವಿರುದ್ಧ ಯುದ್ಧ ಕಹಳೆಗಳನ್ನು ಮೊಳಗಿಸುವ ಯಾಜಕರೂ ನಮ್ಮೊಂದಿಗೆ ಇರುತ್ತಾರೆ. ಇಸ್ರಯೇಲರೇ, ನಿಮ್ಮ ಪೂರ್ವಜರ ದೇವರಾದ ಸರ್ವೇಶ್ವರನೊಡನೆ ಯುದ್ಧಮಾಡಬೇಡಿ; ನೀವು ಜಯಿಸಲಾರಿರಿ,” ಎಂದು ಕೂಗಿ ಹೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದೇವರು ತಾವೇ ಅಧಿಪತಿಯಾಗಿ ನಮ್ಮ ಸಂಗಡ ಇದ್ದಾರೆ. ಇದಲ್ಲದೆ ನಿಮಗೆ ವಿರೋಧವಾಗಿ ಜಯಧ್ವನಿ ಮಾಡುವ ತುತೂರಿಗಳನ್ನು ಹಿಡಿದುಕೊಂಡ ಅವರ ಯಾಜಕರು ನಮಗಿದ್ದಾರೆ. ಇಸ್ರಾಯೇಲರೇ, ನೀವು ನಿಮ್ಮ ಪಿತೃಗಳ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ಯುದ್ಧಮಾಡಬೇಡಿರಿ. ನೀವು ಜಯಹೊಂದುವುದಿಲ್ಲ,” ಎಂದನು.