2 Chronicles 13:15 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಗ ಅಬೀಯನ ಸೈನ್ಯದವರು ದೊಡ್ಡ ಆರ್ಭಟ ಮಾಡಿದರು. ಆರ್ಭಟಿಸುತ್ತಾ ಮುಂದೆ ಸಾಗಿದರು. ಯಾರೊಬ್ಬಾಮನ ಸೈನ್ಯವನ್ನು ಮತ್ತು ಎಲ್ಲಾ ಇಸ್ರೇಲರನ್ನು ಯೆಹೂದದ ಅಬೀಯನ ಸೈನ್ಯವು ಸೋಲಿಸುವಂತೆ ದೇವರು ಮಾಡಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅನಂತರ ಜನರು ಆರ್ಭಟಿಸಿದರು. ಅವರು ಆರ್ಭಟಿಸಿದ ಕೂಡಲೆ ಯೆಹೋವನಾದ ದೇವರು ಯಾರೊಬ್ಬಾಮನನ್ನೂ, ಎಲ್ಲಾ ಇಸ್ರಾಯೇಲರನ್ನೂ ಅಬೀಯನಿಂದಲೂ ಹಾಗೂ ಯೆಹೂದ್ಯರಿಂದಲೂ ಅಪಜಯಗೊಳಿಸಿದನು.
Kannada BSI Bible 2016
ಇದಲ್ಲದೆ ಯೆಹೂದದ ಮನುಷ್ಯರು ಆರ್ಭಟಿಸಿದರು; ಯೆಹೂದದ ಮನುಷ್ಯರು ಆರ್ಭಟಿ ಸಿದಾಗ ಏನಾಯಿತಂದರೆ, ದೇವರು ಅಬೀಯನ ಮತ್ತು ಯೆಹೂದದವರ ಮುಂದೆ ಯಾರೊಬ್ಬಾಮ ನನ್ನೂ ಸಮಸ್ತ ಇಸ್ರಾಯೇಲನ್ನೂ ಹೊಡೆದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅನಂತರ ಜನರು ಆರ್ಭಟಿಸಿದರು. ಅವರು ಆರ್ಭಟಿಸಿದ ಕೂಡಲೆ ದೇವರು ಯಾರೊಬ್ಬಾಮನನ್ನೂ ಎಲ್ಲಾ ಇಸ್ರಾಯೇಲ್ಯರನ್ನೂ ಅಬೀಯನಿಂದಲೂ ಯೆಹೂದ್ಯರಿಂದಲೂ ಅಪಜಯಪಡಿಸಿದ್ದರಿಂದ
Kannada Bible (KNCL) BSI 2016
ಅನಂತರ ಜನರು ಆರ್ಭಟಿಸಿದರು. ಅವರು ಆರ್ಭಟಿಸಿದ ಕೂಡಲೆ ದೇವರು ಯಾರೊಬ್ಬಾಮನನ್ನೂ ಎಲ್ಲಾ ಇಸ್ರಯೇಲರನ್ನೂ ಅಬೀಯನಿಂದ ಹಾಗೂ ಯೆಹೂದ್ಯರಿಂದ ಅಪಜಯಗೊಳಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಯೆಹೂದ್ಯರು ಆರ್ಭಟಿಸಿದರು. ಯೆಹೂದ್ಯರು ಆರ್ಭಟಿಸಿದಾಗ, ದೇವರು ಅಬೀಯನ ಮತ್ತು ಯೆಹೂದದವರ ಮುಂದೆ ಯಾರೊಬ್ಬಾಮನನ್ನೂ, ಸಮಸ್ತ ಇಸ್ರಾಯೇಲರನ್ನೂ ಅಪಜಯಗೊಳಿಸಿದರು.