2 Chronicles 14:3 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಮೂರ್ತಿಪೂಜೆಗಾಗಿ ಮಾಡಿದ ಯಜ್ಞವೇದಿಕೆಗಳನ್ನು ತೆಗೆದುಹಾಕಿಸಿದನು. ವಿಗ್ರಹಾರಾಧಕರ ಪೂಜಾಸ್ಥಳಗಳನ್ನು, ಸ್ಮಾರಕಕಲ್ಲುಗಳನ್ನು ಒಡೆದು ಹಾಳುಮಾಡಿಸಿದನು. ಅಶೇರಸ್ತಂಭಗಳನ್ನು ತುಂಡು ಮಾಡಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇವನು ಅನ್ಯದೇವತೆಗಳ ಯಜ್ಞವೇದಿಗಳನ್ನೂ ಪೂಜಾಸ್ಥಳಗಳನ್ನೂ ತೆಗೆದುಹಾಕಿ ಕಲ್ಲುಕಂಬಗಳನ್ನು ಒಡೆದು ಹಾಕಿ, ಅಶೇರ ವಿಗ್ರಹ ಸ್ತಂಭಗಳನ್ನು ಕೆಡವಿ ಬಿಟ್ಟನು.
Kannada BSI Bible 2016
ಅವನು ಅನ್ಯದೇವರು ಗಳ ಬಲಿಪೀಠಗಳನ್ನೂ ಉನ್ನತ ಸ್ಥಳಗಳನ್ನೂ ತೆಗೆದು ಹಾಕಿ ವಿಗ್ರಹಗಳನ್ನು ಒಡೆದುಬಿಟ್ಟು ಅವುಗಳ ತೋಪು ಗಳನ್ನು ಕಡಿದುಹಾಕಿ,
Kannada BSI JV (ಕನ್ನಡ ಸತ್ಯವೇದವು J.V. (BSI))
ಇವನು ಅನ್ಯದೇವತೆಗಳ ಯಜ್ಞವೇದಿಗಳನ್ನೂ ಪೂಜಾಸ್ಥಳಗಳನ್ನೂ ತೆಗೆದುಹಾಕಿ ಕಲ್ಲುಕಂಬಗಳನ್ನು ಒಡಿಸಿ ಅಶೇರವಿಗ್ರಹಸ್ತಂಭಗಳನ್ನು ಕಡಿಸಿಬಿಟ್ಟು ಯೆಹೂದ್ಯರಿಗೆ -
Kannada Bible (KNCL) BSI 2016
ಇವನು ಅನ್ಯದೇವತೆಗಳ ಯಜ್ಞವೇದಿಗಳನ್ನೂ ಪೂಜಾಸ್ಥಳಗಳನ್ನೂ ತೆಗೆದುಹಾಕಿಸಿದನು. ಕಲ್ಲುಕಂಬಗಳನ್ನು ಒಡೆದು ಹಾಕಿಸಿದನು. ಅಶೇರ ವಿಗ್ರಹಸ್ತಂಭಗಳನ್ನು ಕೆಡವಿಬಿಟ್ಟನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ಅನ್ಯದೇವರುಗಳ ಬಲಿಪೀಠಗಳನ್ನೂ, ಉನ್ನತ ಪೂಜಾಸ್ಥಳಗಳನ್ನೂ ತೆಗೆದುಹಾಕಿ, ವಿಗ್ರಹಗಳನ್ನು ಒಡೆದುಬಿಟ್ಟು, ಅವುಗಳ ಅಶೇರ ಸ್ತಂಭಗಳನ್ನು ಕಡಿದುಹಾಕಿದನು.