2 Chronicles 16:12 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಸನ ಆಳ್ವಿಕೆಯ ಮೂವತ್ತೊಂಭತ್ತನೆಯ ವರ್ಷದಲ್ಲಿ ಅವನ ಕಾಲಿಗೆ ರೋಗ ಬಂದಿತು. ಅದು ಅಧಿಕವಾಗಿ ಹೆಚ್ಚಿದ್ದರಿಂದ ಅವನು ಯೆಹೋವನ ಸಹಾಯವನ್ನು ಕೇಳದೆ ವೈದ್ಯರ ನೆರವನ್ನೇ ಪಡೆದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಸನ ಆಳ್ವಿಕೆಯ ಮೂವತ್ತೊಂಬತ್ತನೆಯ ವರ್ಷದಲ್ಲಿ ಅವನ ಕಾಲುಗಳಿಗೆ ಬಹು ಕಠಿಣವಾದ ರೋಗ ತಗಲಿತು. ಈ ರೋಗದಲ್ಲೂ ಅವನು ಯೆಹೋವನ ಸಹಾಯವನ್ನು ಕೋರದೆ ವೈದ್ಯರ ಸಹಾಯವನ್ನೇ ಕೋರಿದನು.
Kannada BSI Bible 2016
ಆಸನು ತನ್ನ ಆಳ್ವಿಕೆಯ ಮೂವತ್ತೊಂಭತ್ತನೇ ವರುಷದಲ್ಲಿ ತನ್ನ ಕಾಲುಗಳಲ್ಲಿ ರೋಗವುಳ್ಳವನಾ ಗಿದ್ದನು. ಅವನ ರೋಗವು ಅತಿಘೋರವಾಯಿತು. ಅವನು ತನ್ನ ರೋಗದಲ್ಲಿ ಕರ್ತನನ್ನು ಹುಡುಕದೆ ವೈದ್ಯರನ್ನು ಹುಡುಕಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನ ಆಳಿಕೆಯ ಮೂವತ್ತೊಂಭತ್ತನೆಯ ವರುಷದಲ್ಲಿ ಅವನ ಕಾಲುಗಳಿಗೆ ಬಹುಕಠಿಣವಾದ ರೋಗವುಂಟಾಯಿತು. ಈ ರೋಗದಲ್ಲಿಯೂ ಅವನು ಯೆಹೋವನ ಸಹಾಯವನ್ನು ಕೋರದೆ ವೈದ್ಯರ ಸಹಾಯವನ್ನೇ ಕೋರಿದನು.
Kannada Bible (KNCL) BSI 2016
ಅವನ ಆಳ್ವಿಕೆಯ ಮೂವತ್ತೊಂಬತ್ತನೆಯ ವರ್ಷದಲ್ಲಿ ಅವನ ಕಾಲುಗಳಿಗೆ ಬಹು ಕಠಿಣವಾದ ರೋಗ ತಗಲಿತು. ಈ ರೋಗದಲ್ಲೂ ಅವನು ಸರ್ವೇಶ್ವರನ ಸಹಾಯವನ್ನು ಕೋರಲಿಲ್ಲ; ವೈದ್ಯರ ಸಹಾಯವನ್ನು ಮಾತ್ರ ಕೋರಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಆಸನು ತನ್ನ ಆಳಿಕೆಯ ಮೂವತ್ತೊಂಬತ್ತನೆಯ ವರ್ಷದಲ್ಲಿ ಅವನ ಕಾಲುಗಳಿಗೆ ರೋಗ ತಗುಲಿತು. ಅವನ ರೋಗವು ಅತಿಘೋರವಾಯಿತು. ಆದರೆ ಅವನು ತನ್ನ ರೋಗದಲ್ಲಿ ಯೆಹೋವ ದೇವರನ್ನು ಹುಡುಕದೆ, ವೈದ್ಯರನ್ನು ಹುಡುಕಿದನು.