2 Chronicles 16:6 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಗ ಆಸನೂ ಇಸ್ರೇಲಿನ ಎಲ್ಲಾ ಜನರೂ ಒಟ್ಟಿಗೆ ರಾಮಕ್ಕೆ ಹೋಗಿ ಅಲ್ಲಿ ಬಾಷನು ಕೋಟೆಕಟ್ಟಲು ತಂದಿಟ್ಟಿದ್ದ ಕಲ್ಲುಮರಗಳನ್ನೆಲ್ಲಾ ತೆಗೆದು ಮಿಚ್ಪ ಮತ್ತು ಗೆಬ ಪಟ್ಟಣಗಳನ್ನು ಭದ್ರಪಡಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅನಂತರ ಅರಸನಾದ ಆಸನು ಎಲ್ಲಾ ಯೆಹೂದ್ಯರನ್ನು ಕರೆಯಿಸಿ ರಾಮ ಕೋಟೆಗಾಗಿ ಬಾಷನು ತರಿಸಿದ್ದ ಕಲ್ಲುಮರಗಳನ್ನು ಅವರ ಮುಖಾಂತರವಾಗಿ ತೆಗೆದುಕೊಂಡು ಹೋಗಿ ಗೆಬ, ಮಿಚ್ಪ ಎಂಬ ಪಟ್ಟಣಗಳನ್ನು ಭದ್ರಪಡಿಸಿದನು.
Kannada BSI Bible 2016
ಆಗ ಅರಸನಾದ ಆಸನು ಯೆಹೂದದವರೆಲ್ಲರನ್ನು ಕರಕೊಂಡುಹೋದನು. ಬಾಷನು ಕಟ್ಟಿಸುತ್ತಿದ್ದ ರಾಮದ ಕಲ್ಲುಗಳನ್ನೂ ಅದರ ತೊಲೆಗಳನ್ನೂ ತಕ್ಕೊಂಡು ಹೋದರು; ಅವುಗಳಿಂದ ಗೆಬವನ್ನೂ ಮಿಚ್ಪೆಯನ್ನೂ ಕಟ್ಟಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅನಂತರ ಅರಸನಾದ ಆಸನು ಎಲ್ಲಾ ಯೆಹೂದ್ಯರನ್ನು ಕರಿಸಿ ಬಾಷನು ರಾಮಕೋಟೆಗಾಗಿ ತರಿಸಿದ್ದ ಕಲ್ಲುಮರಗಳನ್ನು ಇವರ ಮುಖಾಂತರವಾಗಿ ತೆಗೆದುಕೊಂಡುಹೋಗಿ ಗೆಬ, ವಿುಚ್ಪ ಎಂಬ ಪಟ್ಟಣಗಳನ್ನು ಭದ್ರಪಡಿಸಿದನು.
Kannada Bible (KNCL) BSI 2016
ಅನಂತರ ಅರಸ ಆಸನು ಎಲ್ಲಾ ಯೆಹೂದ್ಯರನ್ನು ಕರೆಸಿ ಬಾಷನು ರಾಮಕೋಟೆಗಾಗಿ ತರಿಸಿದ್ದ ಕಲ್ಲುಮರಗಳನ್ನು ಇವರ ಮುಖಾಂತರ ತೆಗೆದುಕೊಂಡು ಹೋಗಿ ಗೆಬ, ಮಿಚ್ಪ ಎಂಬ ಪಟ್ಟಣಗಳನ್ನು ಭದ್ರಪಡಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅರಸನಾದ ಆಸನು ಯೆಹೂದದವರೆಲ್ಲರನ್ನು ಕರಕೊಂಡು ಹೋದನು. ಬಾಷನು ಕಟ್ಟಿಸುತ್ತಾ ಇದ್ದ ರಾಮ ಪಟ್ಟಣದ ಕಲ್ಲುಗಳನ್ನೂ, ಅದರ ತೊಲೆಗಳನ್ನೂ ತೆಗೆದುಕೊಂಡುಹೋಗಿ, ಅವುಗಳಿಂದ ಗಿಬೆಯ ಮತ್ತು ಮಿಚ್ಪೆ ಎಂಬ ನಗರಗಳನ್ನು ಕಟ್ಟಿಸಿದನು.