2 Chronicles 18:2 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಕೆಲವು ವರ್ಷಗಳ ನಂತರ ಯೆಹೋಷಾಫಾಟನು ಸಮಾರ್ಯ ಪಟ್ಟಣದಲ್ಲಿ ಅಹಾಬನನ್ನು ಸಂಧಿಸಲು ಹೋದನು. ಯೆಹೋಷಾಫಾಟನಿಗೂ ಅವನೊಂದಿಗೆ ಬಂದಿದ್ದ ಜನರಿಗೂ ಅಹಾಬನು ಅನೇಕ ದನಕುರಿಗಳನ್ನು ವಧಿಸಿ ಔತಣಮಾಡಿಸಿದನು. ರಾಮೋತ್‌ಗಿಲ್ಯೋದ್ ಪಟ್ಟಣದ ಮೇಲೆ ಯುದ್ಧಮಾಡಲು ಅಹಾಬನು ಯೆಹೋಷಾಫಾಟನನ್ನು ಪ್ರೇರೇಪಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕೆಲವು ವರ್ಷಗಳಾದ ನಂತರ ಅವನ ಬಳಿಗೆ ಸಮಾರ್ಯಕ್ಕೆ ಹೋದನು. ಅಹಾಬನು ಅವನಿಗೂ ಅವನೊಡನೆ ಬಂದ ಜನರಿಗಾಗಿಯೂ ಹಿಂಡುಗಳಿಂದ ಅನೇಕ ದನಕುರಿಗಳನ್ನು ಕೊಯ್ದು ಔತಣವನ್ನು ಏರ್ಪಡಿಸಿದನು. ತನ್ನ ಸಂಗಡ ಯುದ್ಧಕ್ಕಾಗಿ ರಾಮೋತ್ ಗಿಲ್ಯಾದಿಗೆ ಬರಬೇಕೆಂದು ಅವನನ್ನು ಪ್ರೇರೇಪಿಸಿದನು.
Kannada BSI Bible 2016
ಕೆಲವು ವರುಷಗಳ ತರುವಾಯ ಅವನು ಅಹಾಬನ ಬಳಿಗೆ ಸಮಾರ್ಯಕ್ಕೆ ಹೋದನು; ಆಗ ಅಹಾಬನು ಅವನಿಗೋಸ್ಕರವೂ ಅವನ ಸಂಗಡ ಇದ್ದ ಜನರಿಗೋ ಸ್ಕರವೂ ಅನೇಕ ಕುರಿದನಗಳನ್ನು ಕೊಯಿಸಿ ತನ್ನ ಸಂಗಡ ಗಿಲ್ಯಾದಿನಲ್ಲಿರುವ ರಾಮೋತಿಗೆ ಹೋಗಲು ಪ್ರೇರೇಪಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕೆಲವು ವರುಷಗಳಾದನಂತರ ಅವನ ಬಳಿಗೆ ಸಮಾರ್ಯಕ್ಕೆ ಹೋದಾಗ ಅಹಾಬನು ಅವನಿಗೋಸ್ಕರವೂ ಅವನೊಡನೆ ಬಂದ ಜನರಿಗೋಸ್ಕರವೂ ಅನೇಕಾನೇಕ ದನಕುರಿಗಳನ್ನು ವಧಿಸಿ ಔತಣಮಾಡಿಸಿ ತನ್ನ ಸಂಗಡ ಯುದ್ಧಕ್ಕಾಗಿ ರಾಮೋತ್‍ಗಿಲ್ಯಾದಿಗೆ ಬರಬೇಕೆಂದು ಅವನನ್ನು ಪ್ರೇರಿಸಿದನು.
Kannada Bible (KNCL) BSI 2016
ಆಹಾಬನು ಅವನಿಗೂ ಅವನೊಡನೆ ಬಂದ ಜನರಿಗೂ ಅನೇಕಾನೇಕ ದನಕುರಿಗಳನ್ನು ವಧಿಸಿ ಔತಣವನ್ನೇರ್ಪಡಿಸಿದನು. ರಾಮೋತ್ ಗಿಲ್ಯಾದಿಗೆ ಮುತ್ತಿಗೆ ಹಾಕಲು ತನ್ನ ಸಂಗಡ ಬರಬೇಕೆಂದು ಅವನನ್ನು ಪ್ರೇರಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಕೆಲವು ವರ್ಷಗಳ ತರುವಾಯ ಅವನು ಅಹಾಬನ ಬಳಿಗೆ ಸಮಾರ್ಯಕ್ಕೆ ಹೋದನು. ಆಗ ಅಹಾಬನು ಅವನಿಗೋಸ್ಕರವೂ, ಅವನ ಸಂಗಡ ಇದ್ದ ಜನರಿಗೋಸ್ಕರವೂ ಅನೇಕ ಕುರಿದನಗಳನ್ನೂ ವಧಿಸಿ ಔತಣವನ್ನೇರ್ಪಡಿಸಿ, ತನ್ನ ಸಂಗಡ ಯುದ್ಧಕ್ಕಾಗಿ ಗಿಲ್ಯಾದಿನ ರಾಮೋತಿಗೆ ಹೋಗಲು ಪ್ರೇರೇಪಿಸಿದನು.