2 Chronicles 18:26 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವರಿಗೆ “ಮೀಕಾಯೆಹುವನ್ನು ಸೆರೆಮನೆಗೆ ಹಾಕಿ. ನಾನು ಯುದ್ಧದಿಂದ ಸುರಕ್ಷಿತವಾಗಿ ಹಿಂತಿರುಗುವ ತನಕ ಬರಿ ರೊಟ್ಟಿ ಮತ್ತು ನೀರನ್ನು ಮಾತ್ರ ಅವನಿಗೆ ಕೊಡಿ ಎಂದು ಅರಸನು ಆಜ್ಞಾಪಿಸುತ್ತಾನೆ ಎಂದು ಹೇಳಿ” ಎಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರಿಗೆ, ‘ನಾನು ಸುರಕ್ಷಿತನಾಗಿ ಹಿಂದಿರುಗುವವರೆಗೂ ಇವನನ್ನು ಸೆರೆಯಲ್ಲಿಟ್ಟು ಸೆರೆಮನೆಯ ಅನ್ನಪಾನಗಳನ್ನೇ ಕೊಟ್ಟು ಕುಗ್ಗಿಸಬೇಕೆಂದು ಅರಸನು ಹೇಳಿದ್ದಾನೆ’ ಎಂದು ಹೇಳಿರಿ” ಎಂಬುದಾಗಿ ಆಜ್ಞಾಪಿಸಿದನು.
Kannada BSI Bible 2016
ಅರಸನು ಹೇಳು ವದೇನಂದರೆ--ನೀವು ಇವನನ್ನು ಸೆರೆಮನೆಯಲ್ಲಿಟ್ಟು ನಾನು ಸಮಾಧಾನವಾಗಿ ಬರುವ ಮಟ್ಟಿಗೂ ಅವನಿಗೆ ಬಾಧೆಯ ರೊಟ್ಟಿಯನ್ನೂ ಬಾಧೆಯ ನೀರನ್ನೂ ತಿನ್ನಲು ಕೊಡಿರಿ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ಸುರಕ್ಷಿತನಾಗಿ ಹಿಂದಿರುಗುವವರೆಗೂ ಇವನನ್ನು ಸೆರೆಯಲ್ಲಿಟ್ಟು ಸೆರೆಮನೆಯ ಅನ್ನಪಾನಗಳನ್ನೇ ಕೊಟ್ಟು ಕುಗ್ಗಿಸಬೇಕು ಎಂದು ಅರಸನು ಅನ್ನುತ್ತಾನೆ ಎಂದು ಹೇಳಿರಿ ಎಂಬದಾಗಿ ಆಜ್ಞಾಪಿಸಿದನು.
Kannada Bible (KNCL) BSI 2016
‘ನಾನು, ಸುರಕ್ಷಿತನಾಗಿ ಹಿಂದಿರುಗುವವರೆಗೂ ಇವನನ್ನು ಸೆರೆಯಲ್ಲಿಟ್ಟು ಸೆರೆಮನೆಯ ಅನ್ನಪಾನಗಳನ್ನೇ ಕೊಟ್ಟು ಕುಗ್ಗಿಸಬೇಕೆಂದು ಅರಸರು ಹೇಳಿದ್ದಾರೆ’ ಎಂದು ತಿಳಿಸಿರಿ,” ಎಂದು ಆಜ್ಞಾಪಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
‘ನಾನು ಸಮಾಧಾನವಾಗಿ ತಿರುಗಿ ಬರುವವರೆಗೂ ನೀವು ಇವನನ್ನು ಸೆರೆಮನೆಯಲ್ಲಿಟ್ಟು, ಅವನಿಗೆ ರೊಟ್ಟಿ ಮತ್ತು ನೀರನ್ನು ಬಿಟ್ಟು ಮತ್ತೇನೂ ಕೊಡಬೇಡಿರೆಂದು ಅರಸನು ಹೇಳಿದ್ದಾನೆ’ ಎಂದು ತಿಳಿಸು,” ಎಂದನು.