2 Chronicles 18:29 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋಷಾಫಾಟನಿಗೆ ಅಹಾಬನು, “ನಾನು ಯುದ್ಧರಂಗಕ್ಕೆ ಹೋಗುವ ಮೊದಲು ವೇಷ ಬದಲಾಯಿಸುತ್ತೇನೆ. ನೀನು ರಾಜವಸ್ತ್ರದಲ್ಲಿಯೇ ಇರು” ಎಂದು ಹೇಳಿ ತನ್ನ ರೂಪವನ್ನು ಬದಲಾಯಿಸಿದನು. ಇಬ್ಬರು ರಾಜರೂ ಯುದ್ಧರಂಗಕ್ಕಿಳಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಸ್ರಾಯೇಲರ ಅರಸನು ಯೆಹೋಷಾಫಾಟನಿಗೆ, “ನಾನು ವೇಷ ಹಾಕಿಕೊಂಡು ಯುದ್ಧ ಭೂಮಿಗೆ ಬರುತ್ತೇನೆ; ನೀನಾದರೋ ನಿನ್ನ ರಾಜವಸ್ತ್ರಗಳನ್ನು ಧರಿಸಿಕೊಂಡೇ ಬಾ” ಎಂದು ಹೇಳಿ ವೇಷ ಹಾಕಿಕೊಂಡನು; ತರುವಾಯ ಯುದ್ಧ ಭೂಮಿಗೆ ಹೋದರು.
Kannada BSI Bible 2016
ಆಗ ಇಸ್ರಾಯೇಲಿನ ಅರ ಸನು ಯೆಹೋಷಾಫಾಟನಿಗೆ--ನಾನು ನನ್ನನ್ನು ಮರೆ ಮಾಜಿ ಯುದ್ಧದಲ್ಲಿ ಪ್ರವೇಶಿಸುವೆನು; ಆದರೆ ನೀನು ನಿನ್ನ ವಸ್ತ್ರಗಳನ್ನು ಧರಿಸಿಕೊಂಡಿರು ಅಂದನು. ಹಾಗೆಯೇ ಇಸ್ರಾಯೇಲಿನ ಅರಸನು ತನ್ನನ್ನು ಮರೆಮಾಜಿದನು; ಅವರು ಯುದ್ಧಕ್ಕೆ ಹೋದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಸ್ರಾಯೇಲ್ಯರ ಅರಸನು ಯೆಹೋಷಾಫಾಟನಿಗೆ - ನಾನು ವೇಷಹಾಕಿಕೊಂಡು ರಣರಂಗಕ್ಕೆ ಬರುವೆನು; ನೀನಾದರೋ ನಿನ್ನ ರಾಜವಸ್ತ್ರಗಳನ್ನು ಧರಿಸಿಕೊಂಡೇ ಬಾ ಎಂದು ಹೇಳಿ ವೇಷಹಾಕಿಕೊಂಡನು; ತರುವಾಯ ರಣರಂಗಕ್ಕೆ ಹೋದರು.
Kannada Bible (KNCL) BSI 2016
ಇಸ್ರಯೇಲರ ಅರಸನು ಯೆಹೋಷಾಫಾಟನಿಗೆ, ‘ನಾನು ವೇಷಹಾಕಿಕೊಂಡು ರಣರಂಗಕ್ಕೆ ಬರುತ್ತೇನೆ; ನೀನಾದರೋ ನಿನ್ನ ರಾಜವಸ್ತ್ರಗಳನ್ನು ಧರಿಸಿಕೊಂಡೇ ಬಾ,” ಎಂದು ಹೇಳಿ ವೇಷಹಾಕಿಕೊಂಡನು; ತರುವಾಯ ರಣರಂಗಕ್ಕೆ ಹೋದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಇಸ್ರಾಯೇಲಿನ ಅರಸನು ಯೆಹೋಷಾಫಾಟನಿಗೆ, “ನಾನು ವೇಷಹಾಕಿಕೊಂಡು ಯುದ್ಧದಲ್ಲಿ ಪ್ರವೇಶಿಸುವೆನು. ಆದರೆ ನೀನು ನಿನ್ನ ರಾಜವಸ್ತ್ರಗಳನ್ನು ಧರಿಸಿಕೊಂಡಿರು,” ಎಂದನು. ಹಾಗೆಯೇ ಇಸ್ರಾಯೇಲಿನ ಅರಸನು ವೇಷಹಾಕಿಕೊಂಡು ಯುದ್ಧಕ್ಕೆ ಹೋದನು.