2 Chronicles 2:1 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದೇವಾಲಯವನ್ನು ಕಟ್ಟಿ ದೇವರಿಗೆ ಘನತೆಯನ್ನು ಸಲ್ಲಿಸಲು ಸೊಲೊಮೋನನು ಯೋಜಿಸಿದನು. ಮಾತ್ರವಲ್ಲದೆ ತನಗೆ ವಾಸಿಸಲು ಒಂದು ಅರಮನೆಯನ್ನು ಕಟ್ಟಲೂ ಸಿದ್ಧತೆ ಮಾಡಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸೊಲೊಮೋನನು ಯೆಹೋವನಿಗೋಸ್ಕರ ಒಂದು ಆಲಯವನ್ನೂ ಮತ್ತು ತನಗೋಸ್ಕರ ಒಂದು ಅರಮನೆಯನ್ನೂ ಕಟ್ಟಿಸಲು ತೀರ್ಮಾನಿಸಿದನು.
Kannada BSI Bible 2016
ಆದರೆ ಸೊಲೊಮೋನನು ಕರ್ತನ ಹೆಸರಿಗೋಸ್ಕರ ಮನೆಯನ್ನೂ ತನ್ನ ರಾಜ್ಯ ಕ್ಕೋಸ್ಕರ ಮನೆಯನ್ನೂ ಕಟ್ಟಿಸುವದಕ್ಕೆ ತೀರ್ಮಾ ನಿಸಿಕೊಂಡನು;
Kannada BSI JV (ಕನ್ನಡ ಸತ್ಯವೇದವು J.V. (BSI))
ಸೊಲೊಮೋನನು ಯೆಹೋವನ ಹೆಸರಿಗೋಸ್ಕರ ಆಲಯವನ್ನೂ ತನಗೋಸ್ಕರ ಅರಮನೆಯನ್ನೂ ಕಟ್ಟಿಸಬೇಕೆಂದು ಮನಸ್ಸುಳ್ಳವನಾಗಿ
Kannada Bible (KNCL) BSI 2016
ಸೊಲೊಮೋನನು ಸರ್ವೇಶ್ವರನ ಹೆಸರಿಗಾಗಿ ಒಂದು ಅರಮನೆಯನ್ನು ಕಟ್ಟಿಸಬೇಕೆಂದು ಮನಸ್ಸುಮಾಡಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರಿಗೋಸ್ಕರ ಒಂದು ಆಲಯವನ್ನೂ, ತನಗೋಸ್ಕರ ಒಂದು ಅರಮನೆಯನ್ನೂ ಕಟ್ಟಿಸಲು ಸೊಲೊಮೋನನು ಅಪ್ಪಣೆಕೊಟ್ಟನು.