2 Chronicles 2:11 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅದಕ್ಕೆ ಹೂರಾಮನು ಸೊಲೊಮೋನನಿಗೆ ಪತ್ರದ ಮೂಲಕ ಹೀಗೆ ಉತ್ತರಿಸಿದನು, “ಸೊಲೊಮೋನನೇ, ಯೆಹೋವನು ತನ್ನ ಜನರನ್ನು ಪ್ರೀತಿಸುತ್ತಾನೆ. ಆದ್ದರಿಂದಲೇ ನಿನ್ನನ್ನು ಅವರ ಅರಸನನ್ನಾಗಿ ಆರಿಸಿಕೊಂಡಿರುತ್ತಾನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ತೂರಿನ ಅರಸನಾದ ಹೂರಾಮನು ಸೊಲೊಮೋನನಿಗೆ ಪತ್ರದ ಮೂಲಕ ತನ್ನ ಒಪ್ಪಿಗೆ ಸೂಚಿಸಿದನು. “ಯೆಹೋವನು ತನ್ನ ಪ್ರಜೆಗಳನ್ನು ಪ್ರೀತಿಸುವವನಾಗಿರುವುದರಿಂದ ನಿನ್ನನ್ನು ಅವರ ಅರಸನನ್ನಾಗಿ ನೇಮಿಸಿದ್ದಾನೆ.”
Kannada BSI Bible 2016
ಆಗ ತೂರಿನ ಅರಸನಾದ ಹಿರಾಮನು ಪ್ರತ್ಯು ತ್ತರವನ್ನು ಬರೆದು ಸೊಲೊಮೋನನಿಗೆ ಕಳುಹಿಸಿಕರ್ತನು ತನ್ನ ಜನರನ್ನು ಪ್ರೀತಿ ಮಾಡಿದ್ದರಿಂದ ಆತನು ನಿನ್ನನ್ನು ಅವರ ಮೇಲೆ ಅರಸನಾಗಲು ಮಾಡಿದ್ದಾನೆ ಎಂದು ಹೇಳಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ತೂರಿನ ಅರಸನಾದ ಹೂರಾಮನು ಪತ್ರದ ಮೂಲಕವಾಗಿ ಸೊಲೊಮೋನನಿಗೆ - ಯೆಹೋವನು ತನ್ನ ಪ್ರಜೆಗಳನ್ನು ಪ್ರೀತಿಸುವವನಾಗಿರುವದರಿಂದ ನಿನ್ನನ್ನು ಅವರ ಅರಸನನ್ನಾಗಿ ನೇವಿುಸಿದ್ದಾನೆ.
Kannada Bible (KNCL) BSI 2016
ಟೈರಿನ ಅರಸ ಹೂರಾಮನು ಪತ್ರದ ಮೂಲಕ ಸೊಲೊಮೋನನಿಗೆ, “ಸರ್ವೇಶ್ವರ ತಮ್ಮ ಪ್ರಜೆಗಳನ್ನು ಪ್ರೀತಿಸುವವರು. ಆದುದರಿಂದ ನಿನ್ನನ್ನು ಆ ಜನರ ಅರಸನನ್ನಾಗಿ ನೇಮಿಸಿದ್ದಾರೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಟೈರಿನ ಅರಸನಾದ ಹೀರಾಮನು ಉತ್ತರವನ್ನು ಬರೆದು ಸೊಲೊಮೋನನಿಗೆ ಕಳುಹಿಸಿದನು: “ಯೆಹೋವ ದೇವರು ತಮ್ಮ ಜನರನ್ನು ಪ್ರೀತಿಮಾಡಿದ್ದರಿಂದ, ನಿನ್ನನ್ನು ಜನರ ಮೇಲೆ ಅರಸನನ್ನಾಗಿ ಮಾಡಿದ್ದಾರೆ,” ಎಂದು ಹೇಳಿದನು.