2 Chronicles 2:3 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸೊಲೊಮೋನನು ತನ್ನ ಸ್ನೇಹಿತನೂ ತೂರ್ ದೇಶದ ರಾಜನೂ ಆದ ಹೂರಾಮನಿಗೆ ಹೀಗೆ ಬರೆದು ಕಳುಹಿಸಿದನು: “ನನ್ನ ತಂದೆಯಾದ ದಾವೀದನ ಅರಮನೆಗೆ ಬೇಕಾದ ದೇವದಾರುಮರಗಳನ್ನು ನೀನು ಒದಗಿಸಿದಂತೆಯೇ ನನಗೂ ನೀನು ಸಹಾಯ ಮಾಡಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇದಲ್ಲದೆ, ಸೊಲೊಮೋನನು ದೂತರ ಮುಖಾಂತರವಾಗಿ ತೂರಿನ ಅರಸನಾದ ಹೀರಾಮನಿಗೆ, “ನನ್ನ ತಂದೆಯಾದ ದಾವೀದನಿಗೆ ವಾಸಮಾಡುವುದಕ್ಕಾಗಿ ಅರಮನೆಯನ್ನು ಕಟ್ಟಿಸಲು ದೇವದಾರು ಮರಗಳನ್ನು ಕಳುಹಿಸಿ, ಅವನಿಗೋಸ್ಕರ ಹೇಗೆ ಸಹಾಯ ಮಾಡಿದೆಯೋ ಹಾಗೆಯೇ ನನಗೂ ಮಾಡು.
Kannada BSI Bible 2016
ಇದ ಲ್ಲದೆ ಸೊಲೊಮೋನನು ತೂರಿನ ಅರಸನಾದ ಹೂರಾಮನಿಗೆ--ವಾಸವಾಗಿರುವ ಮನೆಯನ್ನು ತನಗೆ ಕಟ್ಟಿಸಲು ನೀನು ನನ್ನ ತಂದೆಯಾದ ದಾವೀದನಿಗೆ ದೇವದಾರು ಮರಗಳನ್ನು ಕಳುಹಿಸಿ ಅವನಿಗೋಸ್ಕರ ಹೇಗೆ ಮಾಡಿದಿಯೋ ಹಾಗೆಯೇ ನನಗೂ ಮಾಡು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇದಲ್ಲದೆ ಅವನು ದೂತರ ಮುಖಾಂತರವಾಗಿ ತೂರಿನ ಅರಸನಾದ ಹೂರಾಮನಿಗೆ - ನನ್ನ ತಂದೆಯಾದ ದಾವೀದನು ತನ್ನ ವಾಸಕ್ಕೋಸ್ಕರ ಅರಮನೆಯನ್ನು ಕಟ್ಟಿಸಿಕೊಳ್ಳುವದಕ್ಕಾಗಿ ನೀನು ಅವನಿಗೆ ದೇವದಾರುಮರಗಳನ್ನು ಕಳುಹಿಸಿದಿಯಲ್ಲಾ.
Kannada Bible (KNCL) BSI 2016
ಇದಲ್ಲದೆ, ಟೈರಿನ ಅರಸ ಹೂರಾಮನಿಗೆ ದೂತರ ಮುಖಾಂತರ, “ನನ್ನ ತಂದೆ ದಾವೀದ ತಮ್ಮ ವಾಸಕ್ಕೆ ಅರಮನೆಯನ್ನು ಕಟ್ಟಿಸಿಕೊಳ್ಳುವುದಕ್ಕಾಗಿ ನೀನು ದೇವದಾರು ಮರಗಳನ್ನು ಕಳುಹಿಸಿದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸೊಲೊಮೋನನು ಟೈರಿನ ಅರಸನಾದ ಹೀರಾಮನಿಗೆ, “ನೀನು ನನ್ನ ತಂದೆ ದಾವೀದನಿಗೆ ವಾಸವಾಗಿರುವ ಅರಮನೆಯನ್ನು ಕಟ್ಟಿಸಲು, ದೇವದಾರು ಮರಗಳನ್ನು ಕಳುಹಿಸಿ, ಅವನಿಗೋಸ್ಕರ ಹೇಗೆ ಸಹಾಯ ಮಾಡಿದೆಯೋ, ಹಾಗೆಯೇ ನನಗೂ ಮಾಡು.