2 Chronicles 20:11 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವರನ್ನು ನಾಶಮಾಡದೆ ಹೋದದ್ದಕ್ಕೆ ಈಗ ಅವರು ಮಾಡುತ್ತಿರುವುದನ್ನು ನೀನೇ ನೋಡು. ನೀನು ನಮಗೆ ಕೊಟ್ಟ ದೇಶದಿಂದ ನಮ್ಮನ್ನು ಹೊರಡಿಸಲು ಬಂದಿದ್ದಾರೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಈಗ ಅವರು ಉಪಕಾರಕ್ಕೆ ಅಪಕಾರಮಾಡಿ, ನೀನು ನಮಗೆ ಅನುಗ್ರಹಿಸಿದ ಸ್ವತ್ತಿನೊಳಗಿಂದ ನಮ್ಮನ್ನು ಹೊರ ಓಡಿಸುವುದಕ್ಕಾಗಿ ನಮ್ಮ ಮೇಲೆ ಯುದ್ಧಕ್ಕೆ ಬಂದಿರುತ್ತಾರೆ.
Kannada BSI Bible 2016
ಇಗೋ, ನಮಗೆ ನೀನು ಸ್ವಾಧೀನ ಮಾಡಿಕೊಳ್ಳಲು ಕೊಟ್ಟ ನಿನ್ನ ಸ್ವಾಸ್ಥ್ಯದೊಳಗಿಂದ ಅವರು ಬಂದು ನಮ್ಮನ್ನು ಹೊರಡಿಸಬೇಕೆಂದು ನಮಗೆ ಪ್ರತೀಕಾರ ಮಾಡುತ್ತಾರೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಈಗ ಇವರು ಉಪಕಾರಕ್ಕೆ ಅಪಕಾರಮಾಡಿ ನೀನು ನಮಗೆ ಅನುಗ್ರಹಿಸಿದ ಸ್ವಾಸ್ತ್ಯದೊಳಗಿಂದ ನಮ್ಮನ್ನು ಹೊರಪಡಿಸುವದಕ್ಕೋಸ್ಕರ ನಮ್ಮ ಮೇಲೆ ಯುದ್ಧಕ್ಕೆ ಬಂದಿರುತ್ತಾರೆ.
Kannada Bible (KNCL) BSI 2016
ಈಗ ಅವರು ಉಪಕಾರಕ್ಕೆ ಅಪಕಾರಮಾಡಿ, ನೀವು ನಮಗೆ ಅನುಗ್ರಹಿಸಿದ ಸೊತ್ತಿನಿಂದ ನಮ್ಮನ್ನು ಹೊರತಳ್ಳುವುದಕ್ಕಾಗಿ, ನಮ್ಮ ಮೇಲೆ ಯುದ್ಧಕ್ಕೆ ಬಂದಿರುತ್ತಾರೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ಬಂದು, ನೀವು ನಮಗೆ ಸ್ವಾಧೀನಮಾಡಿಕೊಳ್ಳಲು ಕೊಟ್ಟ ನಿಮ್ಮ ಸ್ವಾಸ್ತ್ಯದೊಳಗಿಂದ ನಮ್ಮನ್ನು ಹೊರಡಿಸುವುದರಿಂದ ನಮಗೆ ಪ್ರತೀಕಾರ ಮಾಡುತ್ತಾರೆ.