2 Chronicles 20:17 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನೀವು ಈ ಯುದ್ಧದಲ್ಲಿ ಹೋರಾಡುವ ಅವಶ್ಯವಿಲ್ಲ. ನಿಮ್ಮ ಸ್ಥಳಗಳಲ್ಲಿ ಸ್ಥಿರವಾಗಿ ನಿಂತುಕೊಂಡಿರಿ. ಯೆಹೋವನ ರಕ್ಷಣಾಕಾರ್ಯವನ್ನು ನೀವು ನೋಡುವಿರಿ. ಭಯಪಡಬೇಡಿರಿ; ಚಿಂತೆಗೊಳಗಾಗಬೇಡಿರಿ; ಯೆಹೋವನು ನಿಮ್ಮೊಂದಿಗಿದ್ದಾನೆ. ಆದ್ದರಿಂದ ನೀವು ನಾಳೆ ಹೋಗಿ ಆ ಸೈನ್ಯವನ್ನು ಎದುರಿಸಿರಿ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಈ ಸಮೂಹದೊಂದಿಗೆ ನೀವು ಯುದ್ಧಮಾಡುವುದು ಅವಶ್ಯವಿಲ್ಲ. ಯೆಹೂದ್ಯರೇ, ಯೆರೂಸಲೇಮಿನವರೇ, ಸುಮ್ಮನೆ ನಿಂತುಕೊಂಡು ಯೆಹೋವನು ನಿಮಗೋಸ್ಕರ ಮಾಡುವ ರಕ್ಷಣಾ ಕಾರ್ಯವನ್ನು ನೋಡಿರಿ; ಹೆದರಬೇಡಿರಿ, ಕಳವಳಗೊಳ್ಳಬೇಡಿರಿ. ನಾಳೆ ಅವರೆದುರಿಗೆ ಹೊರಡಿರಿ, ಯೆಹೋವನು ನಿಮ್ಮ ಸಂಗಡ ಇರುವನು” ಎಂದು ಹೇಳಿದನು.
Kannada BSI Bible 2016
ಇದರಲ್ಲಿ ನೀವು ಯುದ್ಧ ಮಾಡಲು ಅವಶ್ಯವಿಲ್ಲ; ನೀವು ನೆಲೆಯಾಗಿ ನಿಂತು ಕೊಂಡು ಕರ್ತನು ನಿಮಗೆ ಮಾಡುವ ರಕ್ಷಣೆಯನ್ನು ನೋಡಿರಿ; ಯೆಹೂದದವರೇ, ಯೆರೂಸಲೇಮಿನ ವರೇ, ಭಯಪಡಬೇಡಿರಿ, ಹೆದರಬೇಡಿರಿ; ಮಾರನೇ ದಿವಸ ಅವರೆದುರಿಗೆ ಹೊರಟು ಹೋಗಿರಿ; ಕರ್ತನು ನಿಮ್ಮ ಸಂಗಡ ಇದ್ದಾನೆ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಈ ಸಾರಿ ನೀವು ಯುದ್ಧಮಾಡುವದು ಅವಶ್ಯವಿಲ್ಲ. ಯೆಹೂದ್ಯರೇ, ಯೆರೂಸಲೇವಿುನವರೇ, ಸುಮ್ಮನೆ ನಿಂತುಕೊಂಡು ಯೆಹೋವನು ನಿಮಗೋಸ್ಕರ ನಡಿಸುವ ರಕ್ಷಣಾಕಾರ್ಯವನ್ನು ನೋಡಿರಿ; ಹೆದರಬೇಡಿರಿ, ಕಳವಳಗೊಳ್ಳಬೇಡಿರಿ. ನಾಳೆ ಅವರೆದುರಿಗೆ ಹೊರಡಿರಿ, ಯೆಹೋವನು ನಿಮ್ಮ ಸಂಗಡ ಇರುವನು ಎಂದು ಹೇಳಿದನು.
Kannada Bible (KNCL) BSI 2016
ಈ ಸಾರಿ ನೀವು ಯುದ್ಧಮಾಡುವುದು ಅವಶ್ಯವಿಲ್ಲ. ಯೆಹೂದ್ಯರೇ, ಜೆರುಸಲೇಮಿನವರೇ, ಸುಮ್ಮನೆ ನಿಂತುಕೊಂಡು ಸರ್ವೇಶ್ವರ ನಿಮಗಾಗಿ ನಡೆಸುವ ರಕ್ಷಣಾಕಾರ್ಯವನ್ನು ನೋಡಿರಿ; ಹೆದರಬೇಡಿ, ಕಳವಳಗೊಳ್ಳಬೇಡಿ. ನಾಳೆ ಅವರೆದುರಿಗೆ ಹೊರಡಿರಿ; ಸರ್ವೇಶ್ವರ ನಿಮ್ಮೊಂದಿಗೆ ಇರುವರು!” ಎಂದು ಹೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದರಲ್ಲಿ ನೀವು ಯುದ್ಧಮಾಡಲು ಅವಶ್ಯವಲ್ಲ. ನೀವು ನೆಲೆಯಾಗಿ ನಿಂತುಕೊಂಡು, ಯೆಹೋವ ದೇವರು ನಿಮಗೆ ಕೊಡುವ ಬಿಡುಗಡೆಯನ್ನು ನೋಡಿರಿ. ಯೆಹೂದದವರೇ, ಯೆರೂಸಲೇಮಿನವರೇ, ಭಯಪಡಬೇಡಿರಿ, ಹೆದರಬೇಡಿರಿ. ಮೂರನೇ ದಿವಸ ಅವರೆದುರಿಗೆ ಹೊರಟು ಹೋಗಿರಿ. ಯೆಹೋವ ದೇವರು ನಿಮ್ಮ ಸಂಗಡ ಇದ್ದಾರೆ,” ಎಂದನು.