2 Chronicles 20:25 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋಷಾಫಾಟನೂ ಅವನ ಸೈನಿಕರೂ ಬಂದು ಸತ್ತವರ ದೇಹದಿಂದ ಬೆಲೆಬಾಳುವ ವಸ್ತುಗಳನ್ನು ಸೂರೆ ಮಾಡಿದರು. ಅವರು ಅನೇಕ ಪಶುಗಳನ್ನು, ಐಶ್ವರ್ಯವನ್ನು, ಬಟ್ಟೆಬರೆಗಳನ್ನು ಮತ್ತು ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡರು. ಯೆಹೋಷಾಫಾಟನು ಮತ್ತು ಅವನ ಜನರು ಹೊತ್ತುಕೊಂಡು ಹೋಗಲಾರದಷ್ಟು ವಸ್ತುಗಳಿದ್ದವು; ಅವುಗಳನ್ನು ಶೇಖರಿಸಲು ಮೂರು ದಿವಸಗಳು ಬೇಕಾಯಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋಷಾಫಾಟನೂ ಅವನ ಜನರೂ ಸುಲಿಗೆ ಮಾಡುವುದಕ್ಕೋಸ್ಕರ ಅಲ್ಲಿಗೆ ಹೋದರು. ಅವರಿಗೆ ದ್ರವ್ಯ, ವಸ್ತ್ರ, ಶ್ರೇಷ್ಠಾಯುಧಗಳು ರಾಶಿರಾಶಿಯಾಗಿ ಸಿಕ್ಕಿದವು. ಅವರು ಹೊರಲಾರದಷ್ಟು ಸುಲಿಗೆಮಾಡಿದರು, ಕೊಳ್ಳೆಯು ಬಲು ಹೆಚ್ಚಾಗಿದ್ದುದರಿಂದ ಅವರು ಮೂರು ದಿನಗಳ ವರೆಗೂ ಕೂಡಿಸುತ್ತಿದ್ದರು.
Kannada BSI Bible 2016
ಯೆಹೋಷಾಫಾಟನೂ ಅವನ ಜನರೂ ಅವರ ವಸ್ತುಗಳನ್ನು ಕೊಳ್ಳೆಮಾಡಲು ಬಂದಾಗ ಅವರು ಹೆಣ ಗಳ ಬಳಿಯಲ್ಲಿ ದ್ರವ್ಯವನ್ನೂ ಪ್ರಿಯವಾದ ಆಭರಣ ಗಳನ್ನೂ ಬಹಳವಾಗಿ ಕಂಡುಕೊಂಡು ತಾವು ಹೊರ ಲಾರದಷ್ಟು ಸುಲುಕೊಂಡರು. ಕೊಳ್ಳೆಯು ಅಷ್ಟು ಅಧಿಕವಾದದರಿಂದ ಅದನ್ನು ಮೂರು ದಿವಸಗಳ ವರೆಗೂ ಸುಲುಕೊಳ್ಳುತ್ತಾ ಇದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋಷಾಫಾಟನೂ ಅವನ ಜನರೂ ಸುಲಿಗೆಮಾಡುವದಕ್ಕೋಸ್ಕರ ಅಲ್ಲಿಗೆ ಹೋಗಲು ಅವರಿಗೆ ದ್ರವ್ಯ ವಸ್ತ್ರ ಶ್ರೇಷ್ಠಾಯುಧ ಇವುಗಳು ರಾಶಿರಾಶಿಯಾಗಿ ಸಿಕ್ಕಿದವು. ಅವರು ಹೊರಲಾರದಷ್ಟು ಸುಲುಕೊಂಡರು. ಕೊಳ್ಳೆಯು ಬಲುಹೆಚ್ಚಾಗಿದ್ದದರಿಂದ ಅವರು ಮೂರು ದಿನಗಳವರೆಗೂ ಕೂಡಿಸುತ್ತಿದ್ದರು.
Kannada Bible (KNCL) BSI 2016
ಯೆಹೋಷಾಫಾಟನೂ ಅವನ ಜನರೂ ಸುಲಿಗೆಮಾಡುವುದಕ್ಕಾಗಿ ಅಲ್ಲಿಗೆ ಹೋದರು. ಅವರಿಗೆ ದ್ರವ್ಯ, ವಸ್ತ್ರ, ಶ್ರೇಷ್ಠಾಯುಧ, ಇವುಗಳು ರಾಶಿರಾಶಿಯಾಗಿ ಸಿಕ್ಕಿದವು. ಅವರು ಹೊರಲಾರದಷ್ಟನ್ನೂ ಸುಲಿದುಕೊಂಡರು. ಕೊಳ್ಳೆಯ ಮೊತ್ತ ಹೆಚ್ಚಾಗಿದ್ದುದರಿಂದ ಅವರು ಮೂರು ದಿನಗಳವರೆಗೂ ಕೂಡಿಸುತ್ತಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋಷಾಫಾಟನೂ, ಅವನ ಜನರೂ ಅವರ ವಸ್ತ್ರಗಳನ್ನೂ, ವಸ್ತುಗಳನ್ನೂ ಕೊಳ್ಳೆಮಾಡಲು ಬಂದಾಗ, ಅವರು ಹೆಣಗಳ ಬಳಿಯಲ್ಲಿ ದ್ರವ್ಯವನ್ನೂ, ಆಭರಣಗಳನ್ನೂ ಬಹಳವಾಗಿ ಕಂಡುಕೊಂಡು, ತಾವು ಒಯ್ಯಲಿಕ್ಕಾಗದಷ್ಟು ಹೆಚ್ಚಾಗಿ ಸುಲಿದುಕೊಂಡರು. ಕೊಳ್ಳೆಯು ಅಷ್ಟು ಅಧಿಕವಾದುದರಿಂದ ಅದನ್ನು ಮೂರು ದಿವಸಗಳವರೆಗೂ ಸುಲಿದುಕೊಳ್ಳುತ್ತಾ ಇದ್ದರು.