2 Chronicles 20:9 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವರು, ‘ನಮಗೆ ಖಡ್ಗ, ಕಾಯಿಲೆ, ಬರ, ಶಿಕ್ಷೆಗಳಿಂದ ಸಂಕಷ್ಟ ಉಂಟಾದರೆ ನಾವು ನಿನ್ನ ಮತ್ತು ನಿನ್ನ ಆಲಯದೆದುರು ನಿಂತು ನಿನಗೆ ಮೊರೆಯಿಡುವಾಗ ನೀನು ನಮ್ಮ ಮೊರೆಯನ್ನು ಕೇಳಿ ನಮಗೆ ಸಹಾಯ ಮಾಡುವೆ. ನಿನ್ನ ಹೆಸರು ಈ ಆಲಯದ ಮೇಲಿದೆ’ ಎಂದು ಹೇಳಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ತಮ್ಮ ಮೇಲೆ ನ್ಯಾಯ ತೀರ್ಪಿನ ಖಡ್ಗ, ಘೋರವ್ಯಾಧಿ, ಕ್ಷಾಮ ಮೊದಲಾದ ಆಪತ್ತುಗಳು ನಮಗೆ ಬರುವಾಗ, ನಾವು ನಿನ್ನ ನಾಮ ಮಹತ್ತು ಇರುವ ಈ ಆಲಯದ ಮುಂದೆಯೂ, ನಿನ್ನ ಮುಂದೆಯೂ ನಿಂತು, ನಮ್ಮ ಇಕ್ಕಟ್ಟಿನಲ್ಲಿ ನಿನಗೆ ಮೊರೆಯಿಡುವುದಾದರೆ ನೀನು ಕೇಳಿ ರಕ್ಷಿಸುವಿ ಎಂದುಕೊಂಡಿದ್ದೇವೆ.
Kannada BSI Bible 2016
ನಿನ್ನ ಹೆಸರು ಈ ಆಲಯದಲ್ಲಿರುವದರಿಂದ ಕತ್ತಿಯೂ ನ್ಯಾಯತೀರಿಸುವ ಶಿಕ್ಷೆಯೂ ಜಾಡ್ಯವೂ ಬರವೂ ಏನಾದರೂ ನಮ್ಮ ಮೇಲೆ ಬಂದರೆ ನಾವು ಈ ಆಲಯದ ಮುಂದೆಯೂ ನಿನ್ನ ಸಮ್ಮುಖದಲ್ಲಿಯೂ ನಿಂತು ನಮ್ಮ ಇಕ್ಕಟ್ಟಿನಲ್ಲಿ ನಿನ್ನನ್ನು ಕೂಗುವಾಗ ನೀನು ಕೇಳಿ ರಕ್ಷಿಸುವವನಾಗಿದ್ದೀ ಎಂದು ಹೇಳಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ತಮ್ಮ ಮೇಲೆ ಖಡ್ಗವಿಧಿ ಘೋರವ್ಯಾಧಿ ಕ್ಷಾಮ ಮೊದಲಾದ ಆಪತ್ತುಗಳು ಬರುವಾಗ ತಾವು ನಿನ್ನ ನಾಮಮಹತ್ತು ಇರುವ ಈ ಆಲಯದ ಮುಂದೆಯೂ ನಿನ್ನ ಮುಂದೆಯೂ ನಿಂತು ತಮ್ಮ ಇಕ್ಕಟ್ಟಿನಲ್ಲಿ ನಿನಗೆ ಮೊರೆಯಿಡುವದಾದರೆ ನೀನು ಕೇಳಿ ರಕ್ಷಿಸುವಿ ಎಂದುಕೊಂಡರಷ್ಟೆ.
Kannada Bible (KNCL) BSI 2016
ತಮ್ಮ ಮೇಲೆ ಖಡ್ಗವಿಧಿ, ಘೋರವ್ಯಾಧಿ, ಕ್ಷಾಮಡಾಮರ, ಮೊದಲಾದ ಆಪತ್ತುಗಳು ಬರುವಾಗ, ನಿಮ್ಮ ನಾಮಮಹಿಮೆ ಇರುವ ಈ ಆಲಯದ ಮುಂದೆಯೂ ನಿಮ್ಮ ಮುಂದೆಯೂ ನಿಂತು, ತಮ್ಮ ಇಕ್ಕಟ್ಟಿನಲ್ಲಿ ನಿಮಗೆ ಮೊರೆ ಇಡುವುದಾದರೆ ನೀವು ಆಲಿಸಿ ರಕ್ಷಿಸುವಿರಿ ಎಂದುಕೊಂಡರಷ್ಟೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
‘ನಿಮ್ಮ ಹೆಸರು ಈ ಆಲಯದಲ್ಲಿರುವುದರಿಂದ ಖಡ್ಗವೂ ನ್ಯಾಯತೀರಿಸುವ ಶಿಕ್ಷೆಯೂ, ಘೋರವ್ಯಾಧಿಯೂ ಬರವೇನಾದರೂ ನಮ್ಮ ಮೇಲೆ ಬಂದರೆ, ನಾವು ಈ ಆಲಯದ ಮುಂದೆಯೂ, ನಿಮ್ಮ ಸಮ್ಮುಖದಲ್ಲಿಯೂ ನಿಂತು, ನಮ್ಮ ಇಕ್ಕಟ್ಟಿನಲ್ಲಿ ನಿಮ್ಮನ್ನು ಕೂಗುವಾಗ, ನೀವು ಕೇಳಿ ರಕ್ಷಿಸುವಿರಿ,’ ಎಂದು ಹೇಳಲಿಲ್ಲವೇ?