2 Chronicles 21:11 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋರಾಮನು ಯೆಹೂದ ರಾಜ್ಯದ ಬೆಟ್ಟಗಳ ಮೇಲೆ ಪೂಜಾಸ್ಥಳಗಳನ್ನು ಕಟ್ಟಿಸಿದನು. ಪ್ರಜೆಗಳು ದೇವರ ಚಿತ್ತಕ್ಕನುಸಾರವಾಗಿ ನಡೆಯದಂತೆ ಅವರನ್ನು ಯೆಹೋವನಿಂದ ದೂರಕ್ಕೆ ನಡೆಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು ಯೆಹೂದದ ಗುಡ್ಡಗಳಲ್ಲಿ, ಪೂಜಾ ಸ್ಥಳಗಳನ್ನು ಏರ್ಪಡಿಸಿ ಯೆರೂಸಲೇಮಿನವರನ್ನು ದೈವದ್ರೋಹ ಮಾಡುವಂತೆ ಪ್ರೇರೇಪಿಸಿ, ಯೆಹೂದ್ಯರನ್ನು ಸನ್ಮಾರ್ಗದಿಂದ ತಪ್ಪಿಸಿದನು.
Kannada BSI Bible 2016
ಅವನು ಯೆಹೂದದ ಪರ್ವತಗಳಲ್ಲಿ ಉನ್ನತ ಸ್ಥಳಗಳನ್ನು ಮಾಡಿ ಯೆರೂಸಲೇಮಿನ ನಿವಾಸಿಗಳನ್ನು ವ್ಯಭಿಚಾರ ಮಾಡಲು ಪ್ರೇರೇಪಿಸಿ ಹಾಗೆಯೇ ಮಾಡಲು ಯೆಹೂ ದದವರನ್ನು ಬಲವಂತ ಮಾಡಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮತ್ತು ಅವನು ಯೆಹೂದದ ಗುಡ್ಡಗಳಲ್ಲಿ ಪೂಜಾಸ್ಥಳಗಳನ್ನು ಏರ್ಪಡಿಸಿ ಯೆರೂಸಲೇವಿುನವರನ್ನು ದೇವದ್ರೋಹಮಾಡುವಂತೆ ಪ್ರೇರಿಸಿ ಯೆಹೂದ್ಯರನ್ನು ಸನ್ಮಾರ್ಗದಿಂದ ತಪ್ಪಿಸಿದನು.
Kannada Bible (KNCL) BSI 2016
ಅವನು ಜುದೇಯದ ಗುಡ್ಡಗಳಲ್ಲಿ ಪೂಜಾಸ್ಥಳಗಳನ್ನು ಏರ್ಪಡಿಸಿ, ಜೆರುಸಲೇಮಿನವರು ದೇವದ್ರೋಹ ಮಾಡುವಂತೆ ಪ್ರೇರೇಪಿಸಿ, ಯೆಹೂದ್ಯರನ್ನು ಸನ್ಮಾರ್ಗದಿಂದ ತಪ್ಪಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ಯೆಹೂದದ ಪರ್ವತಗಳಲ್ಲಿ ಉನ್ನತ ಪೂಜಾಸ್ಥಳಗಳನ್ನು ಮಾಡಿ, ಯೆರೂಸಲೇಮಿನ ನಿವಾಸಿಗಳನ್ನು ವ್ಯಭಿಚಾರ ಮಾಡಲು ಪ್ರೇರೇಪಿಸಿ, ಹಾಗೆಯೇ ಮಾಡಲು ಯೆಹೂದದವರನ್ನು ಬಲವಂತ ಮಾಡಿದನು.