2 Chronicles 22:10 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅತಲ್ಯಳು ಅಹಜ್ಯನ ತಾಯಿ. ತನ್ನ ಮಗನು ಸತ್ತನೆಂಬ ವರ್ತಮಾನ ಸಿಕ್ಕದ ಕೂಡಲೇ ಆಕೆ ಯೆಹೂದದಲ್ಲಿದ್ದ ಎಲ್ಲಾ ರಾಜಕುಮಾರರನ್ನು ಕೊಲ್ಲಿಸಿದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಹಜ್ಯನು ಮರಣ ಹೊಂದಿದನೆಂದು ಅವನ ತಾಯಿಯಾದ ಅತಲ್ಯಳು ಕೇಳಿದ ಕೂಡಲೆ ಯೆಹೂದ ರಾಜ ಸಂತಾನದವರನ್ನೆಲ್ಲಾ ಸಂಹರಿಸಿಬಿಟ್ಟಳು.
Kannada BSI Bible 2016
ಅಹಜ್ಯನ ತಾಯಿಯಾದ ಅತಲ್ಯಳು ತನ್ನ ಮಗನು ಸತ್ತನೆಂದು ಕಂಡಾಗ ಅವಳು ಎದ್ದು ಯೆಹೂದನ ಮನೆಯ ರಾಜ್ಯದ ಸಂತಾನವನ್ನೆಲ್ಲಾ ನಾಶಮಾಡಿದಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಹಜ್ಯನು ಮರಣಹೊಂದಿದನೆಂಬದನ್ನು ಅವನ ತಾಯಿಯಾದ ಅತಲ್ಯಳು ಕೇಳಿದ ಕೂಡಲೆ ಯೆಹೂದ ರಾಜಸಂತಾನದವರನ್ನೆಲ್ಲಾ ಸಂಹರಿಸಿಬಿಟ್ಟಳು.
Kannada Bible (KNCL) BSI 2016
ಅಹಜ್ಯನು ಮರಣಹೊಂದಿದನೆಂಬುದನ್ನು ಅವನ ತಾಯಿ ಅತಲ್ಯಳು ಕೇಳಿದ ಕೂಡಲೆ ಜುದೇಯರ ರಾಜಸಂತಾನದವರನ್ನೆಲ್ಲಾ ಸಂಹರಿಸಿಬಿಟ್ಟಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅಹಜ್ಯನ ತಾಯಿಯಾದ ಅತಲ್ಯಳು ತನ್ನ ಮಗನು ಸತ್ತು ಹೋದದ್ದನ್ನು ಕಂಡಾಗ, ಅವಳು ಎದ್ದು ಯೆಹೂದನ ಮನೆಯ ರಾಜಸಂತಾನದವರನ್ನೆಲ್ಲಾ ನಾಶಮಾಡಲು ಆರಂಭಿಸಿದಳು.