2 Chronicles 23:15 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅರಮನೆಗೆ ಹೋಗುವ ದಾರಿಯಲ್ಲಿ ಕುದುರೆ ಬಾಗಿಲಿನ ಹತ್ತಿರ ಸಿಪಾಯಿಗಳು ಆಕೆಯನ್ನು ಸಂಹರಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ಆಕೆಯನ್ನು ಹಿಡಿದು ಅರಸನ ಅರಮನೆಗೆ ಹೋಗುವ ಕುದುರೆ ಬಾಗಿಲಿನ ತನಕ ಒಯ್ದು, ಅವಳನ್ನು ಕೊಂದು ಹಾಕಿದರು.
Kannada BSI Bible 2016
ಹಾಗೆಯೇ ಅವರು ಅವಳ ಮೇಲೆ ಕೈ ಹಾಕಿದರು. ಅವಳು ಅರಸನ ಮನೆಯ ಬಳಿಯಲ್ಲಿ ಕುದುರೆ ಬಾಗಲಿನ ಪ್ರವೇಶದಲ್ಲಿ ಬಂದಾಗ ಅಲ್ಲಿ ಅವಳನ್ನು ಕೊಂದು ಹಾಕಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ಆಕೆಯನ್ನು ಹಿಡಿದು ಅರಮನೆಗೆ ಹೋಗುವ ಕುದುರೆಬಾಗಲಿನ ತನಕ ಒಯ್ದು ಅಲ್ಲಿ ಕೊಂದರು.
Kannada Bible (KNCL) BSI 2016
ಅವರು ಆಕೆಯನ್ನು ಹಿಡಿದು ಅರಮನೆಗೆ ಹೋಗುವ ಕುದುರೆಬಾಗಿಲಿನ ತನಕ ಒಯ್ದು, ಅಲ್ಲಿ ಕೊಂದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅವರು ಅವಳನ್ನು ಅಧೀನಕ್ಕೆ ತೆಗೆದುಕೊಂಡು, ಅರಮನೆಯ ಬಳಿಯಲ್ಲಿ ಕುದುರೆ ಬಾಗಿಲಿನ ಪ್ರವೇಶದಲ್ಲಿ ಬಂದಾಗ ಅಲ್ಲಿ ಅವಳನ್ನು ಕೊಂದುಹಾಕಿದರು.