2 Chronicles 23:17 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಗ ಜನರೆಲ್ಲರು ಬಾಳನ ಗುಡಿಯೊಳಗೆ ನುಗ್ಗಿ ಅದನ್ನು ಹಾಳು ಮಾಡಿದರು. ಅದರ ಯಜ್ಞವೇದಿಕೆಗಳನ್ನೂ ವಿಗ್ರಹಗಳನ್ನೂ ಪುಡಿಪುಡಿ ಮಾಡಿದರು. ಬಾಳನ ಅರ್ಚಕನಾದ ಮತ್ತಾನನನ್ನು ಬಾಳನ ವೇದಿಕೆಯ ಮುಂದೆಯೇ ಕೊಂದುಹಾಕಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ತರುವಾಯ ಜನರೆಲ್ಲರೂ ಬಾಳನ ಕ್ಷೇತ್ರಕ್ಕೆ ಹೋಗಿ ಪೂಜಾರಿಯಾದ ಮತ್ತಾನನನ್ನು ಯಜ್ಞವೇದಿಗಳ ಎದುರಿನಲ್ಲಿಯೇ ಕೊಂದುಹಾಕಿದನು; ಆ ಕ್ಷೇತ್ರವನ್ನೂ ಅದರಲ್ಲಿದ್ದ ಯಜ್ಞವೇದಿ ಹಾಗೂ ವಿಗ್ರಹಗಳನ್ನೂ ಒಡೆದುಹಾಕಿ ಹಾಳುಮಾಡಿ ಬಿಟ್ಟರು.
Kannada BSI Bible 2016
ಸಮಸ್ತ ಜನರು ಬಾಳನ ಮನೆಗೆ ಹೋಗಿ ಅದನ್ನು ಕೆಡವಿಹಾಕಿ ಅದರ ಬಲಿಪೀಠಗಳನ್ನೂ ವಿಗ್ರಹಗಳನ್ನೂ ಒಡೆದುಬಿಟ್ಟು ಬಾಳನ ಪೂಜಾರಿಯಾದ ಮತ್ತಾನನನ್ನು ಬಲಿ ಪೀಠಗಳ ಮುಂದೆ ಕೊಂದುಹಾಕಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ತರುವಾಯ ಜನರೆಲ್ಲರೂ ಬಾಳ್‍ದೇವಸ್ಥಾನಕ್ಕೆ ಹೋಗಿ ಪೂಜಾರಿಯಾದ ಮತ್ತಾನನನ್ನು ಯಜ್ಞವೇದಿಗಳ ಮುಂದೆಯೇ ಕೊಂದು ದೇವಸ್ಥಾನವನ್ನೂ ಅದರಲ್ಲಿದ್ದ ವೇದಿವಿಗ್ರಹಗಳನ್ನೂ ಹಾಳುಮಾಡಿಬಿಟ್ಟರು.
Kannada Bible (KNCL) BSI 2016
ತರುವಾಯ ಜನರೆಲ್ಲರೂ ಬಾಳ್‍ದೇವಸ್ಥಾನಕ್ಕೆ ಹೋಗಿ ಪೂಜಾರಿಯಾದ ಮತ್ತಾನನನ್ನು ಬಲಿಪೀಠಗಳ ಮುಂದೆಯೇ ಕೊಂದರು; ಆ ದೇವಸ್ಥಾನವನ್ನೂ ಅದರಲ್ಲಿದ್ದ ಪೀಠ ಹಾಗೂ ವಿಗ್ರಹಗಳನ್ನೂ ಹಾಳುಮಾಡಿಬಿಟ್ಟರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸಮಸ್ತ ಜನರು ಬಾಳನ ದೇವಸ್ಥಾನಕ್ಕೆ ಹೋಗಿ ಅದನ್ನು ಕೆಡವಿಹಾಕಿ, ಅದರ ಬಲಿಪೀಠಗಳನ್ನೂ ವಿಗ್ರಹಗಳನ್ನೂ ಒಡೆದುಬಿಟ್ಟು, ಬಲಿಪೀಠಗಳ ಮುಂದೆ ಬಾಳನ ಯಾಜಕನಾದ ಮತ್ತಾನನನ್ನು ಕೊಂದುಹಾಕಿದರು.