2 Chronicles 24:13 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಕೆಲಸಗಳ ಮೇಲ್ವಿಚಾರಣೆ ಮಾಡುವವರು ನಂಬಿಗಸ್ತರಾಗಿದ್ದರು. ದೇವಾಲಯವನ್ನು ಸರಿಪಡಿಸುವ ಯೋಜನೆಯು ಪೂರ್ಣಗೊಂಡಿತು. ಅವರು ಅದನ್ನು ಮುಂಚೆ ಹೇಗಿತ್ತೋ ಹಾಗೆಯೇ ಮಾಡಿದರು; ಅಲ್ಲದೆ ಅದಕ್ಕಿಂತಲೂ ಹೆಚ್ಚು ಭದ್ರಪಡಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕೆಲಸ ಮಾಡುವವರು ಆಸಕ್ತಿಯಿಂದ ಜೀರ್ಣೋದ್ಧಾರದ ಕೆಲಸವನ್ನು ಮಾಡಿ ಮುಗಿಸಿದರು. ಹೀಗೆ ಅವರು ದೇವಾಲಯವನ್ನು ಭದ್ರಪಡಿಸಿ ಪೂರ್ವಸ್ಥಿತಿಗೆ ತಂದರು.
Kannada BSI Bible 2016
ಹೀಗೆಯೇ ಕೆಲಸದವರು ಕೆಲಸವನ್ನು ನಡಿಸಿದ್ದರಿಂದ ಕೆಲಸವು ಅವರ ಕೈಯಿಂದ ಪೂರ್ಣ ವಾಯಿತು, ಅವರು ಕರ್ತನ ಆಲಯವನ್ನು ಇದ್ದ ಸ್ಥಿತಿಯಲ್ಲಿ ನಿಲ್ಲಿಸಿ ಅದನ್ನು ಬಲಪಡಿಸಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕೆಲಸಮಾಡುವವರು ಬಹುಪ್ರಯಾಸ ಪಡುತ್ತಿದ್ದದರಿಂದ ಜೀರ್ಣೋದ್ಧಾರದ ಕೆಲಸವು ಮುಂದರಿಯಿತು. ಅವರು ದೇವಾಲಯವನ್ನು ಭದ್ರಪಡಿಸಿ ಪೂರ್ವಸ್ಥಿತಿಗೆ ತಂದರು.
Kannada Bible (KNCL) BSI 2016
ಕೆಲಸ ಮಾಡುವವರು ಬಹು ಶ್ರಮವಹಿಸಿದ್ದರಿಂದ ದುರಸ್ತಿ ಕೆಲಸ ಮುಂದುವರೆಯಿತು. ಅವರು ದೇವಾಲಯವನ್ನು ಭದ್ರಪಡಿಸಿ ಪೂರ್ವಸ್ಥಿತಿಗೆ ತಂದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹೀಗೆ ಕೆಲಸದವರು ಕೆಲಸವನ್ನು ನಡೆಸಿದ್ದರಿಂದ, ಕೆಲಸವು ಅವರ ಕೈಯಿಂದ ಪೂರ್ಣವಾಯಿತು. ಅವರು ಯೆಹೋವ ದೇವರ ಆಲಯವನ್ನು ಮೊದಲಿದ್ದ ಸ್ಥಿತಿಗೆ ಅದನ್ನು ತಂದು ಭದ್ರಪಡಿಸಿದರು.